ಅರಕೇರಾ ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಾರ್ಕಂಡಯ್ಯ ಸ್ವಾಮಿ ಅವರಿಗೆ ರಾಯಲ್ ಆಸ್ಪತ್ರೆ ವೈದ್ಯ ಹನುಮಂತ್ರಾಯ ನಾಯಕ ತಪಾಸಣೆ ಮಾಡಿದರು. ಸಿಬ್ಬಂದಿ ಈರಪ್ಪ, ಪ್ರಭಾಕರ, ಹನುಮಂತ್ರಾಯ, ತಾಯಣ್ಣ, ಪರಶುರಾಮ ಇದ್ದರು. 
ಜಿಲ್ಲೆ

ಎಲ್ಲರೂ ಆರೋಗ್ಯದ ಕಾಳಜಿ ವಹಿಸಲಿ

ಶಾಮಸುಂದರ್ ಕೊಪ್ಪಳಕರ್

ಅರಕೇರಾ: ಕೆಲಸದ ಒತ್ತಡದ ನಡುವೆ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ರಾಯಲ್ ಆಸ್ಪತ್ರೆ ವೈದ್ಯ ಹನುಮಂತ್ರಾಯ ನಾಯಕ ಹೇಳಿದರು. ಪಟ್ಟಣದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸೋಮವಾರ ಮಾತನಾಡಿದರು.

ತುರ್ತು ಸಂದರ್ಭದಲ್ಲಿ ನಡೆಯುವ ಅವಘಡಗಳಿಗೆ ನೆರವಾಗುವ ಅಗ್ನಿಶಾಮಕ ಸಿಬ್ಬಂದಿ ಸಧೃಡವಾಗಿರಬೇಕು. ದೈಹಿಕ ಮತ್ತು ಮಾನಸಿಕವಾಗಿ ಬಲಿಶಾಲಿಯಾಗಲು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದರು.

ಅಗ್ನಿಶಾಮಕ ಠಾಣಾಧಿಕಾರಿ ಮಾರ್ಖಂಡಯ್ಯ ಸ್ವಾಮಿ ಮಾತನಾಡಿ, ನೌಕರಿ ಮಾಡುವಾಗ ಹಲವು ಜವಾಬ್ದಾರಿಗಳಿರುತ್ತವೆ. ಅವುಗಳು ಒತ್ತಡಕ್ಕೆ ದಾರಿ ಮಾಡಿಕೊಡುತ್ತವೆ. ಆರೋಗ್ಯ ಚೆನ್ನಾಗಿದ್ದರೆ, ಬದುಕು ಉತ್ತಮವಾಗಿರುತ್ತದೆ ಎಂದರು.