ಅರಕೇರಾ: ಪಟ್ಟಣದ ತಹಸಿಲ್ ಕಚೇರಿ, ಗ್ರಾಮ ಪಂಚಾಯಿತಿ ಸೇರಿ ತಾಲೂಕಿನ ವಿವಿಧ ಸರ್ಕಾರಿ ಶಾಲಾ, ಕಾಲೇಜ್, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಮಹನೀಯರ ಭಾವಚಿತ್ರಕ್ಕೆ ಬುಧವಾರ ಪುಷ್ಪಾರ್ಪಣೆ ಸಲ್ಲಿಸಲಾಯಿತು.
ಸ್ಥಳೀಯ ಕೆಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಗ್ರಾಪಂ ಅಧ್ಯಕ್ಷೆ ರಂಗಮ್ಮ ನಾಯಕ ಚಾಲನೆ ನೀಡಿದರು. ಬಳಿಕ ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬುದು ಗಾಂಧೀಜಿ ಅವರ ಕನಸಾಗಿತ್ತು. ಗಾಂಧೀಜಿ ಅವರ ಸತ್ಯ, ಅಹಿಂಸೆ ಮಾರ್ಗವನ್ನು ಇಡೀ ವಿಶ್ವವೇ ಮೆಚ್ಚಿದೆ. ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದರು.
ಪ್ರಮುಖರಾದ ತಿಮ್ಮಪ್ಪ ನಾಯಕ ಪೊಲೀಸ್ ಪಾಟೀಲ್, ರಾಕೇಶ ನಾಯಕ ಪೊಲೀಸ್ ಪಾಟೀಲ್, ಬಸವರಾಜ ಪೂಜಾರಿ, ರವಿ ನಾಯಕ, ಸಿದ್ದಪ್ಪ ಪೈಕಾರ, ಡಾ.ರಾಘವೇಂದ್ರ ವಡಗೇರಿ, ಬೂದೆಪ್ಪ ಪರಸಲ್, ಮುದುಕಪ್ಪ ಮೆಣಸಿನಕಾಯಿ, ಭಗವಂತ್ರಾಯ ತಾತೆ, ಶಿವಕುಮಾರ ನಾಡಗೌಡ, ಶಿವರಾಜ ಗುರಿಕಾರ, ನಾಗರಾಜ ದೇವರಮನಿ, ಸಾಹೇಬ ಹುಸೇನ್, ಪಿಡಿಒ ವೆಂಕೋಬ ನಾಯಕ, ವಿಷಯ ನಿರ್ವಾಹಕ ಕನಕರೆಡ್ಡಿ, ಕಂಪ್ಯೂಟರ್ ಆಪರೇಟರ್‌ಗಳಾದ ವೆಂಕಟೇಶ, ರಾಘವೇಂದ್ರ, ಸಾರಿಗೆ ನಿಯಂತ್ರಕ ಚನ್ನಪ್ಪ ಇತರರಿದ್ದರು.