ಜಿಲ್ಲೆ

ಕರೊನಾ ಭತ್ಯೆ ನೀಡಲು ಟೈಲರ್ಸ್‌ ಒತ್ತಾಯ

Raichur

ಅರಕೇರಾ: ಸರ್ಕಾರವು ಕರೊನಾ ಭತ್ಯೆ ನೀಡಬೇಕು ಎಂದು ಟೈಲರ್ ಅಸೋಸಿಯೇಶನ್ ಅಧ್ಯಕ್ಷ ಸಲೀಂ ಒತ್ತಾಯಿಸಿದ್ದಾರೆ.

ಅಸೋಸಿಯೇಶನ್ ಸ್ಥಾಪನಾ ದಿನದ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಭಾನುವಾರ ಹಣ್ಣು-ಬ್ರೆಡ್ ವಿತರಿಸಿ ಮಾತನಾಡಿದರು. ಕರೊನಾ ಸಂದರ್ಭ ಟೈಲರ್‌ಗಳ ಬದುಕು ಅತಂತ್ರವಾಗಿತ್ತು. ಈಗಲೂ ಸಂಕಷ್ಟದಿಂದ ಹೊರಬರಲಾಗುತ್ತಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕರೊನಾ ಭತ್ಯೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಸೂಗೂರೇಶ್ವರ ಎಸ್. ಗುಡಿ ಹಾಗೂ ನಮ್ಮೂರ ನಕ್ಷತ್ರ ರಾಜ್ಯ ಪ್ರಶಸ್ತಿ ಪುರಸ್ಕೃತ ಗುರುಸ್ವಾಮಿಯನ್ನು ಗೌರವಿಸಲಾಯಿತು.