ಅರಕೇರಾ ತಾಲೂಕಿನ ಬಿ.ಗಣೇಕಲ್‌ದಲ್ಲಿ ತಾಪಂ ಎಡಿ ಅಣ್ಣರಾವ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘಟನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಕೃಷ್ಣನಾಯಕ ದೊರೆ, ಮಲ್ಲೇಶಿ ದಳವಾಯಿ, ಬಾಲಯ್ಯ ದೊರೆ, ರಾಮನಗೌಡ, ಕಾಶಿನಾಥ ಕೋರಿ, ಹನುಮಂತ ಬೇರಿ ಇತರರಿದ್ದರು.  
ಜಿಲ್ಲೆ

ಪಿಡಿಒ ತಾರತಮ್ಯ ನೀತಿ ಸಲ್ಲದು

ಪ್ರವೀಣ ಉದುಸಾ ದಲಬಂಜನ್

ಅರಕೇರಾ: ನರೇಗಾದಡಿ ಕೆಲಸ ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘಟನೆ ಪದಾಧಿಕಾರಿಗಳು ತಾಲೂಕಿನ ಬಿ.ಗಣೇಕಲ್ ಗ್ರಾಪಂ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಲ್ಲಿ ಪಿಡಿಒ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಅಲ್ಲದೆ ಕಾರ್ಮಿಕರನ್ನು ಅಗೌರವದಿಂದ ಕಾಣುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಕರ್ತವ್ಯ ಅವಧಿಯಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಈಗಾಗಲೇ ಬರಗಾಲ ಆವರಿಸಿದ್ದು, ಕಾರ್ಮಿಕರಿಗೆ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಡಿಕೆ ಇದ್ದರೂ ಕೆಲಸ ನೀಡದೆ ನಿರ್ಲಕ್ಷ್ಯ ವಹಿಸಿಸಲಾಗುತ್ತಿದೆ. ಇದರಿಂದ ಖಾತ್ರಿ ಫಲಾನುಭವಿಗಳಿಗೆ 20 ದಿನದ ನಿರುದ್ಯೋಗ ಭತ್ಯೆ ನೀಡಬೇಕೆಂದು ಆಗ್ರಹಿಸಿದರು.
ಖಾತ್ರಿ ಯೋಜನೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ಪ್ರಾಥಮಿಕ ಚಿಕಿತ್ಸೆ, ನೆರಳಿನ ವ್ಯವಸ್ಥೆ ಮಾಡಬೇಕು. 100 ಮಾನವ ದಿನಗಳನ್ನು ಸೃಜನೆ ಮಾಡಬೇಕು. 2023-24ನೇ ಸಾಲಿಗೆ ಬಿಡುಗಡೆಯಾದ 15ನೇ ಹಣಕಾಸು ಯೋಜನೆ ಲೆಕ್ಕಪತ್ರ ನೀಡಬೇಕು. ನೆನಗುದಿಗೆ ಬಿದ್ದಿರುವ ಶಿಶುಪಾಲನಾ ಕೇಂದ್ರ ಪ್ರಾರಂಭಿಸಬೇಕು. ಜಾಬ್ ಕಾರ್ಡ್‌ಗಳಲ್ಲಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು. ಎನ್‌ಎಂಎಂಎಸ್ ಅಪ್ಲಿಕೇಷನ್ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ತಾಪಂ ಸಹಾಯಕ ನಿರ್ದೇಶಕ ಅಣ್ಣರಾವ್‌ಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್, ಪ್ರಮುಖರಾದ ಕೃಷ್ಣನಾಯಕ ದೊರೆ, ಮಲ್ಲೇಶಿ