ಜಿಲ್ಲೆ

ಅಂತಾರಾಜ್ಯ ಕ್ರಿಕೆಟ್ ಟೂರ್ನಿಗೆ ಆರಾಧನಾ, ರೂಹಿ ಆಯ್ಕೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಏ. 19ರಿಂದ 27ರವರೆಗೆ ಶಿವಮೊಗ್ಗದಲ್ಲಿ ಆಯೋಜಿಸಿರುವ ಅಂತಾರಾಜ್ಯ ಕ್ರಿಕೆಟ್ ಪಂದ್ಯಾವಳಿಗೆ ಧಾರವಾಡ ಕ್ರಿಕೆಟ್ ಅಕಾಡೆಮಿಯ ವಿದ್ಯಾರ್ಥಿನಿಯರಾದ ರೂಹಿ ದೊಡ್ಡಮನಿ ಮತ್ತು ಆರಾಧನಾ ಹೆಬ್ಳಿಕರ್ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಅಕಾಡೆಮಿ ಅಧ್ಯಕ್ಷ ಎಸ್.ಸಿ. ನೀಲಗುಂದ, ಗೌರವಾಧ್ಯಕ್ಷ ಎಸ್.ಎಂ. ಅಗಡಿ, ಕ್ರಿಕೆಟ್ ತರಬೇತುದಾರ ಜಗದೀಶ ಶುಭ ಕೋರಿದ್ದಾರೆ.