ಜಿಲ್ಲೆ

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಆರಾಧನಾ ಪಂಚರಾತ್ರೋತ್ಸವ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಆ. 30 ರಿಂದ ಸೆ. 3ರವರೆಗೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 352ನೇ ಆರಾಧಾನಾ ಪಂಚರಾತ್ರೋತ್ಸವ ಆಯೋಜಿಸಲಾಗಿದೆ.

ನಿತ್ಯ ವಿಶೇಷ ಪೂಜೆ, ಪಂಡಿತರಿಂದ ವೇದ ಶಾಸ್ತ್ರ ಪಾರಾಯಣ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಸಂಜೆ 6 ಗಂಟೆಗೆ ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದಂಗಳವರಿಂದ ಪ್ರವಚನ ಏರ್ಪಡಿಸಲಾಗಿದೆ.

ಆ. 29ರಂದು ಬೆಳಗ್ಗೆ 7 ಗಂಟೆಗೆ ಋಗ್ವೇದ ನಿತ್ಯ-ನೂತನೋಪಾಕರ್ಮ, 30ರಂದು ಬೆಳಗ್ಗೆ 7 ಗಂಟೆಗೆ ಯಜುರ್ವೆದೀ ನಿತ್ಯ-ನೂತನೋಪಾಕರ್ಮ, 10 ಗಂಟೆಗೆ ಸಾಮೂಹಿಕ ಸತ್ಯ ನಾರಾಯಣ ಪೂಜೆ, ಸಂಜೆ 6 ಗಂಟೆಗೆ ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದಂಗಳವರಿಂದ ಧ್ವಜಾರೋಹಣೆ, ಗೋಪೂಜೆ, ಲಕ್ಷ್ಮೀಪೂಜೆ, ಧಾನ್ಯ ಪೂಜೆ, ಉತ್ಸವ, ಅಷ್ಟಾವಧಾನ ಸೇವೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.

31 ರಂದು ಪೂರ್ವಾರಾಧನೆ, ಸೆ. 1ರಂದು ಮಧ್ಯಾರಾಧನೆ, 2 ರಂದು ಉತ್ತರಾಧನೆ ಜರುಗಲಿದೆ. 3ರಂದು ಸರ್ವ ಸಮರ್ಪಣೋತ್ಸವ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಪವಮಾನ ಹೋಮ ನಂತರ ಹಸ್ತೋದಕ ಮಹಾಮಂಗಳಾರತಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.