ಮಾನ್ವಿ ಸಂತ ಮರಿಯಮ ್ಮಅವರ ದೇವಾಲಯದಲ್ಲಿ ಫಾದರ್ ಡಾ.ಹೆನ್ರಿ ಡಿಸೋಜಾ ಅವರು ಮಾತೆ ಮರಿಯಮ್ಮ ಅವರ ಗವಿಯ ಆರಾಧನಾ ಮಂದಿರ ಉದ್ಘಾಟಿಸಿದರು. ಸಿಸ್ಟರ್ ಸೇಲ್ವಿ, ಜಯಪ್ರಕಾಶ, ಅನಿಲ್‌ಕುಮಾರ ಇತರರಿದ್ದರು. 
ಜಿಲ್ಲೆ

ಆರಾಧನಾ ಮಂದಿರ ಉದ್ಘಾಟನೆ

ರುದ್ರಪ್ಪ ವಾಲಿ

ಮಾನ್ವಿ: ಪಟ್ಟಣದ ಕೋನಾಪುರ ಪೇಟೆಯ ಸಂತ ಮರಿಯಮ್ಮ ದೇವಾಲಯದ ಆವರಣದಲ್ಲಿ ಮಾತೆ ಮರಿಯಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಆರಾಧನಾ ಮಂದಿರ ಹಾಗೂ ಚರ್ಚ್ ಗೋಪುರವನ್ನು ಬಳ್ಳಾರಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಫಾದರ್ ಡಾ. ಹೆನ್ರಿ ಡಿಸೋಜಾ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ, ಜಪಸರ, ಧ್ವಜಾರೋಹಣ, ದಿವ್ಯಬಲಿಪೂಜೆ ಮತ್ತು ಪ್ರಭೋದನೆ ಕಾರ್ಯಕ್ರಮಗಳು ಜರುಗಿದವು. ಧರ್ಮ ಕೇಂದ್ರದ ಫಾದರ್ ಜ್ಞಾನ ಪ್ರಕಾಶಂ, ಫಾದರ್ ಸುರೇಶ್ ವಿನ್ಸೆಂಟ್, ರಾಯಚೂರು ವಲಯದ ಸ್ವಾಮಿ ಸ್ಯಾಮ ನಲನ್, ಫಾದರ್ ಯುವರಾಜ್, ವಂದನೀಯ ನೆಲ್ಸನ್ ಇತರರಿದ್ದರು.