ಜಿಲ್ಲೆ

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ಸಿದ್ದಾಪುರ: ಪಟ್ಟಣದ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ರಾಘವೇಂದ್ರಮಠದಲ್ಲಿ ಆ. 31ರಿಂದ ಸೆ. 3ರ ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ.

ಆ. 31ರಂದು ಬೆಳಗ್ಗೆ ನೈರ್ವಲ್ಯ ವಿಸರ್ಜನೆ, ನಂದಾದೀಪ ಸೇವೆ, ಪಂಚಾಮೃತ, ಅಷ್ಟೋತ್ತರ ಇತರೆ ಅರ್ಚನೆಗಳೊಂದಿಗೆ ಮಂಗಳಾರತಿ, ಸೆ. 1ರಂದು ವಿವಿಧ ಧಾರ್ವಿುಕ ಕಾರ್ಯಕ್ರಮಗಳು, ಮಧ್ಯಾಹ್ನ ಅನ್ನಸಂತರ್ಪಣೆ, ಸೆ. 2ರಂದು ಪಾದಪೂಜೆ, ಕನಕಾಭಿಷೇಕ, ಪವಮಾನ ಹೋಮ, ಸೆ. 3ರಂದು ಶ್ರೀ ವಿದ್ಯಾಗಣಪತಿ, ಶ್ರೀ ರಾಯರಿಗೆ ಪಂಚಾಮೃತ ಇತರೆ ಅರ್ಚನೆಗಳು, ಗಣಹೋಮ, ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀಮಠದ ಅಧ್ಯಕ್ಷ ಗೋಪಾಲ ಗೋವಿಂದ ಶಾನಭಾಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.