ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಏಪ್ರಿಲ್ ತಿಂಗಳಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ.
ಏ.1ರಂದು ಹುಬ್ಬಳ್ಳಿಯ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 2 ರಂದು ಹುಬ್ಬಳ್ಳಿಯ ಹಳ್ಳಿಯಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ ಸಮಾರಂಭ, 4ರಂದು ಬೆಳಿಗ್ಗೆ 11 ಗಂಟೆಗೆ ಚಿತ್ತಾಪುರದ ಹದನೂರು ಗ್ರಾಮದಲ್ಲಿ ನೂತನ ಹಿರೇಮಠದ ಉದ್ಘಾಟನಾ ಸಮಾರಂಭ, ಸಂಜೆ 6 ಗಂಟೆಗೆ ಕಲಬುರ್ಗಿಯ ಸ್ಟೇಷನ್ ಬಬಲಾದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ನಿರ್ಮಿಸಿದ ಸಭಾ ಭವನ ಉದ್ಘಾಟನಾ ಸಮಾರಂಭ, 6 ರಂದು ಸೊರಬ ತಾಲೂಕು ದುಗ್ಲಿ ಕ್ಷೇತ್ರದಲ್ಲಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಕಾರ ವರ್ಧಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು.
7ರಂದು ಮಹಾರಾಷ್ಟ್ರದ ಜವಳಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಳಸಾರೋಹಣ ಧರ್ಮ ಸಮಾರಂಭ, 11ಕ್ಕೆ ಆಲ್ದೂರಿನಲ್ಲಿ ಶ್ರೀ ಮಹಾಗಣಪತಿ ಸ್ಥಾಪನಾ ಮಂಡಲ ಪೂಜಾ ಅಂಗವಾಗಿ ಇಷ್ಟಲಿಂಗ ಮಹಾಪೂಜೆ ನಡೆಸಲಿದ್ದಾರೆ. 12ರಂದು ಪೌರ್ಣಿಮೆಯ ಅಂಗವಾಗಿ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ವಾಸ್ತವ್ಯವಿದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು. 15ರಂದು ಹಾವೇರಿ ಜಿಲ್ಲೆ ಗುತ್ತಲದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಹೇಮಿಗಿರಿ ಮಠದ ಉದ್ಘಾಟನಾ ಸಮಾರಂಭ, 16ಕ್ಕೆ ಬೈಲಹೊಂಗಲದಲ್ಲಿ ಶ್ರೀದುರ್ಗಾ ಪರಮೇಶ್ವರಿ ಜಾತ್ರಾ ಅಂಗವಾಗಿ ಪ್ರಶಸ್ತಿ ಪ್ರದಾನ ಧರ್ಮ ಸಮಾರಂಭ, 17ರಂದು ನವಲಗುಂದದ ಕುಮಾರಕೊಪ್ಪದಲ್ಲಿ ಸಾಮೂಹಿಕ ವಿವಾಹ ಸಮಾರಂಭ, 18ಕ್ಕೆ ನೆಲಮಂಗಲದ ಆದಿಹೊಸಳ್ಳಿಯಲ್ಲಿ ಶ್ರೀ ಈಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭ, 19 ರಟ್ಟಿಹಳ್ಳಿಯಲ್ಲಿ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳವರ ಷಷ್ಠ್ಯಬ್ಧಿ ಧರ್ಮ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
20ರಂದು ದಾವಣಗೆರೆಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಜತ ಮಹೋತ್ಸವ ಧರ್ಮ ಸಮಾರಂಭ, 21ರಂದು ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಹಿರೇಮಠದ ಶಿಲಾನ್ಯಾಸ ಸಮಾರಂಭ, 22ಕ್ಕೆ ಕಮಲಾಪುರ ತಾಲ್ಲೂಕು ತೆಂಗಟಾದಲ್ಲಿ ಶ್ರೀ ಹನುಮಾನ ದೇವಸ್ಥಾನ ಉದ್ಘಾಟನಾ ಸಮಾರಂಭ, 23ರಂದು ಹುಮನಾಬಾದ ತಾಲ್ಲೂಕು ಹುಡುಗಿ ಗ್ರಾಮದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಕಟ್ಟಿಮನಿ ಹಿರೇಮಠದ ಶ್ರೀಗುರು ಪಟ್ಟಾಕಾರ ಮಹೋತ್ಸವ ಧರ್ಮ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
24ರಂದು ಬೆಳಗ್ಗೆ ಲಕ್ಷ್ಮೇಶ್ವರದಲ್ಲಿ ಬಯಲು ಸಭಾಭವನ ಉದ್ಘಾಟನಾ ಸಮಾರಂಭ, ಸಂಜೆ 5 ಗಂಟೆಗೆ ಹೊನ್ನಾಳಿ ತಾಲೂಕು ದೊಡ್ಡೆತ್ತಿನಹಳ್ಳಿಯಲ್ಲಿ ಪುರ ಪ್ರವೇಶ-ಧರ್ಮ ಸಮಾರಂಭ, 25 ರಂದು ದೊಡ್ಡೆತ್ತಿನಹಳ್ಳಿಯಲ್ಲಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಉದ್ಘಾಟನಾ ಧರ್ಮ ಸಮಾರಂಭ, 26ಕ್ಕೆ ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 27 ಮತ್ತು 28ರಂದು ಹಾಸನ ತಾಲೂಕಿನ ಮುಟ್ಟನಹಳ್ಳಿಯಲ್ಲಿ ಪುರ ಪ್ರವೇಶ ಧರ್ಮ ಸಮಾರಂಭ ಹಾಗೂ ಮಹಾಪೂಜಾ, 29ಕ್ಕೆ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ ಲಿಂ.ಶ್ರೀ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳ ಗದ್ದುಗೆ ಪ್ರತಿಷ್ಠಾಪನೆ-ಕಳಸಾರೋಹಣ ಧರ್ಮ ಸಮಾರಂಭ, 30 ರಂದು ಹೂವಿನಹಡಗಲಿ ತಾಲೂಕು ಕೆಂಚಮ್ಮನಹಳ್ಳಿಯಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಪೀಠದ ವಾರ್ತಾ ಸಂಯೋಜನಾಕಾರಿ ಸಿ.ಎಚ್.ಬಾಳನಗೌಡ ತಿಳಿಸಿದ್ದಾರೆ.