ಮದ್ದೂರು ಪಟ್ಟಣದಿಂದ ಕೊಪ್ಪಕ್ಕೆ ಹೋಗುವ ಮರಳಿಗ ಮತ್ತು ಕುಂಟನಹಳ್ಳಿ ಗೇಟ್ ಮಧ್ಯದಲ್ಲಿರುವ ಹಳ್ಳ ಗೇಟ್‌ನಲ್ಲಿ ಚಿತ್ರನಟ ದಿ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಪ್ಪುಗೇಟ್ ನಾಮಫಲಕ ಅನಾವರಣ ಮಾಡಲಾಯಿತು. ಎಚ್.ಎ.ನಾರಾಯಣಸ್ವಾಮಿ, ಸುರೇಶ್, ರತ್ನಮ್ಮ, ಲಿಂಗಾಚಾರಿ ಇದ್ದರು. 
ಜಿಲ್ಲೆ

ಕೊಪ್ಪ ಬಳಿ ಅಪ್ಪುಗೇಟ್ ಅನಾವರಣ

ಮದ್ದೂರು: ಪಟ್ಟಣದಿಂದ ಕೊಪ್ಪಕ್ಕೆ ಹೋಗುವ ಮರಳಿಗ ಮತ್ತು ಕುಂಟನಹಳ್ಳಿ ಗೇಟ್ ಮಧ್ಯದಲ್ಲಿರುವ ಹಳ್ಳ ಗೇಟ್‌ಗೆ ಚಿತ್ರನಟ ದಿ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಂದ ಅಪ್ಪುಗೇಟ್ ಎಂದು ನಾಮಕರಣ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್.ಎ.ನಾರಾಯಣಸ್ವಾಮಿ ತಿಳಿಸಿದರು.

ಅಪ್ಪುಗೇಟ್ ಬಳಿ ನಿರ್ಮಿಸಿರುವ ಅಪ್ಪುಗೇಟ್ ಗೋಡೆಗೆ ವಿಶೇಷ ಪೂಜೆ ಸಲ್ಲಿಸಿ ಗುರುವಾರ ಮಾತನಾಡಿದರು. ಕೊಪ್ಪ ಹೋಬಳಿಯ ಎನ್.ಕೋಡಿಹಳ್ಳಿ, ಅರೆಕಲ್ಲುದೂಡ್ಡಿ, ಸೀನಪ್ಪನ ದೊಡ್ಡಿ, ಈ ಮೂರು ಊರಿಗೂ ಹೋಗುವ ದಾರಿ ಒಂದೇ ಆಗಿದ್ದು, ಈ ರಸ್ತೆಯಲ್ಲಿರುವ ಹಳ್ಳ ಗೇಟ್‌ಗೆ ಮೂರು ಗ್ರಾಮಗಳ ಗ್ರಾಮಸ್ಥರು, ಯುವಕರು, ಅಪ್ಪು ಅಭಿಮಾನಿಗಳು ಸೇರಿ ಅಪ್ಪುಗೇಟ್ ಕರೆಯುಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮತನಾಡಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಎಚ್‌ನಾರಾಯಣ ಸ್ವಾಮಿ ಹಾಗೂ ಸ್ನೇಹಿತರೊಂದಿಗೆ ಈ ಗೇಟ್‌ಗೆ ಗೋಡೆ ಬರಹ ಬರೆಯುವುದರ ಮೂಲಕ, ಅಪ್ಪುಗೇಟ್ ಎಂದು ಹೆಸರಿಡಲಾಗಿದೆ. ಹಾಗಾಗಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇನ್ನೂ ಮುಂದೆ ಅಪ್ಪುಗೇಟ್ ಎಂದು ಅನುಮೋದಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಸುರೇಶ್, ರತ್ನಮ್ಮ ಹಾಗೂ ಲಿಂಗಾಚಾರಿ ಇದ್ದರು.