ಜಮಖಂಡಿ ನಗರದ ಸಜ್ಜಿ ಹನುಮಾನ ದೇವಸ್ಥಾನದ ಹತ್ತಿರ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯ ಭೂಮಿಪೂಜೆಯನ್ನು ಶಾಸಕ ಜಗದೀಶ ಗುಡಗುಂಟಿ ನೆರವೇರಿಸಿದರು. ಪರಮಾನಂದ ಗವರೋಜಿ, ಎಸ್.ಆರ್. ಬಂಡಿವಡ್ಡರ, ಜ್ಯೋತಿ ಗಿರೀಶ, ವಿಶಾಲ ಧರೆಪ್ಪಗೋಳ, ನಾಗಪ್ಪ ಸನದಿ, ಮಲ್ಲು ದಾನಗೌಡ, ಎಂ.ಬಿ. ನ್ಯಾಮಗೌಡ ಮತ್ತಿತರರಿದ್ದರು. 
ಜಿಲ್ಲೆ

ಕೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ

ವಿನಯ ಆಶೋಕ ನಾಯ್ಕ

ಜಮಖಂಡಿ: ಕ್ಷೇತ್ರದ ಗ್ರಾಮೀಣ ರಸ್ತೆಗಳ ಸುಧಾರಣೆ, ನಗರ ಪ್ರದೇಶದಲ್ಲಿನ ಒಳಚರಂಡಿ, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಅಂದಾಜು 25 ಕೋಟಿ ರೂ.ಗಿಂತ ಅಧಿಕ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರದ ಸಜ್ಜಿ ಹನುಮಾನ ದೇವಸ್ಥಾನದ ಹತ್ತಿರ ಲೋಕೋಪಯೋಗಿ ಇಲಾಖೆಯ 2024-25ನೇ ಸಾಲಿನ ಎಸ್‌ಎಚ್‌ಡಿಪಿ5ರ ಒಂದನೇ ಹಂತದ ಕಾಮಗಾರಿ ನಗರದ ಎಸ್‌ಆರ್‌ಎ ಕ್ಲಬ್‌ನಿಂದ ಚನ್ನಮ್ಮ ವೃತ್ತದವರೆಗೆ ಅಂದಾಜು 8.24 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುಮುಖ್ಯ ಅಭಿವೃದ್ಧಿ ಕಾಮಗಾರಿಗಳನ್ನು ಮುತುವರ್ಜಿವಹಿಸಿ ಹಲವು ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವದು. ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಈ ರಸ್ತೆ ಕಾಮಗಾರಿಯು ತ್ವರಿತಗತಿಯಲ್ಲಿ ನಡೆಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಗುತ್ತಿಗೆದಾರ ಎಮ್.ಎಲ್. ಲಮಾಣಿ ಅವರಿಗೆ ಸೂಚಿಸಿದರು.

ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಪಿಡಬ್ಲೂೃಡಿ ಎಇಇ ಎಸ್.ಆರ್. ಬಂಡಿವಡ್ಡರ, ನಗರಸಭೆ ಪೌರಾಯುಕ್ತ ಜ್ಯೋತಿ ಗಿರೀಶ, ಹೆಸ್ಕಾಂ ಎಇಇ ವಿಶಾಲ ಧರೆಪ್ಪಗೋಳ, ನಾಗಪ್ಪ ಸನದಿ, ಮಲ್ಲು ದಾನಗೌಡ, ಎಂ.ಬಿ. ನ್ಯಾಮಗೌಡ, ಈಶ್ವರ ಆದೆಪ್ಪನವರ, ಶಂಕರ ಕಾಳೆ, ಸುರೇಶಗೌಡ ಪಾಟೀಲ, ರಾಜುಗೌಡ ಪಾಟೀಲ, ಧರೆಪ್ಪ ಗುಗ್ಗರಿ, ಅರವಿಂದಗೌಡ ಪಾಟೀಲ, ಸಂಗು ದಳವಾಯಿ, ವಿಠ್ಠಲ ಹಾಲಗೊಂಡ, ರಮೇಶ ಆಲಬಾಳ, ಶ್ರೀಧರ ಕಂಬಿ ಮತ್ತಿತರರಿದ್ದರು.