ಶಿಗ್ಲಿ: ಪೌರಕಾರ್ಮಿಕರು ಹಾಗೂ ಶಿಗ್ಲಿ ಗ್ರಾಮದ ಜನರು ಗ್ರಾಮವನ್ನು ಸ್ವಚ್ಛವಾಗಿಟ್ಟಿದರ ಫಲವಾಗಿ ಶಿಗ್ಲಿ ಗ್ರಾಮವು 2 ಸಲ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಸೇವಾ ಮಂದಿರದ ಇಷ್ಟಲಿಂಗ ಮಹಾಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಗ್ಲಿ ಮತ್ತು ಸುತ್ತಲಿನ ಗ್ರಾಮ ಪಂಚಾಯಿತಿಯ ಸುಮಾರು 50ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಅನಿಲಕುಮಾರ ಕೋರ್ಪಡೆಯವರ ಸನ್ಮಾನಿಸಿದರು.
ಜಿಪಂ ಮಾಜಿ ಸದಸ್ಯ ಎಸ್.ಪಿ.ಬಳಿಗಾರ, ಅಶೋಕ ಶಿರಹಟ್ಟಿ, ಸೋಮಣ್ಣ ಡಾನಗಲ್ಲ ಮಾತನಾಡಿದರು. ಭೈರಪ್ಪ ಕೋರ್ಪಡೆ, ಮಹಾದೇವಪ್ಪ ಹುಲಗೂರ, ಯಲ್ಲಪ್ಪ ತಳವಾರ, ಶಿವಣ್ಣ ಕುರಿ, ಸಂತೋಷ ತಾಂದಳೆ, ಸಿದ್ದಣ್ಣ ಪೂಜಾರ, ಎನ್.ಎನ್. ನೆಗಳೂರ, ಶಂಕ್ರಣ್ಣ ಶಿರಹಟ್ಟಿ, ಶಂಕ್ರಣ್ಣ ಗೋಣೆಪ್ಪಣ್ಣವರ ಇತರರು ಇದ್ದರು.