ಜಿಲ್ಲೆ

ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಮೆಚ್ಚುಗೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆ ಆರ್.ಎನ್. ಶೆಟ್ಟಿ ರೋಡ್​ನ ಅಕ್ಷಯ ಪಾರ್ಕ್ ಅಪಾರ್ಟ್​ವೆುಂಟ್​ನ ಸಮುದಾಯಭವನದಲ್ಲಿ ಗುರುವಾರದಂದು ಪ್ರತಿಷ್ಠಿತ ಗಾರ್ನಿಯರ್ ಕಂಪನಿಯಿಂದ ಆಯೋಜಿಸಿದ್ದ ಹೇರ್ ಕಲರಿಂಗ್ ಅಭಿಯಾನವು ಸಾರ್ವಜನಿಕರು, ಮಹಿಳೆಯರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಉಚಿತ ಅಭಿಯಾನದ ಪ್ರಯೋಜನ ಪಡೆದರು. ವಿಶೇಷವಾಗಿ ಮಹಿಳೆಯರು ಹೇರ್ ಕಲರಿಂಗ್ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಂಪನಿಯ ಪರಿಣಿತರು, ಮಹಿಳೆಯರಿಗೆ ಇಷ್ಟವಾದ ಬಣ್ಣದ ಡೈ ಮಾಡಿದರು. ಜೂನ್ 8 ರಂದು ಹುಬ್ಬಳ್ಳಿಯ ನಂದಗೋಕುಲದಲ್ಲಿ ಹೇರ್ ಕಲರಿಂಗ್ ಅಭಿಯಾನ ನಡೆಯಲಿದೆ. ಸಾರ್ವಜನಿಕರಿಗೆ ಹೇರ್ ಕಲರಿಂಗ್ ಉಚಿತವಾಗಿದ್ದು, ಕಡ್ಡಾಯವಾಗಿ ಮೋಬೈಲ್ ಪೋನ್ ತಂದು ಒಟಿಪಿ ಆಧಾರಿತ ನೋಂದಣಿ ಮಾಡಿಕೊಂಡು ಈ ಅಭಿಯಾನದ ಪ್ರಯೋಜನ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ.