ತಿ.ನರಸೀಪುರ: ತಾಲೂಕು ಭೂ ನ್ಯಾಯ ಮಂಡಳಿಗೆ ತಾಪಂ ಮಾಜಿ ಅಧ್ಯಕ್ಷ ಎಸ್.ಹ್ಯಾಕನೂರು ಗ್ರಾಮದ ಎಚ್.ಎನ್.ಉಮೇಶ್, ತುಂಬಲ ಗ್ರಾಮದ ಅನ್ನದಾನಿ, ಮಾಜಿ ಸದಸ್ಯ ಕುಕ್ಕೂರು ಗ್ರಾಮದ ಕೆ.ಎಸ್.ಗಣೇಶ್ ಹಾಗೂ ಟಿ.ಮೇಗಡಹಳ್ಳಿ ಗ್ರಾಮದ ಶಿವಮೂರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ. ಮೈಸೂರು ಉಪವಿಭಾಗದ ಸಹಾಯಕ ಆಯುಕ್ತರು ಅಧ್ಯಕ್ಷರಾಗಿ ಹಾಗೂ ತಹಸೀಲ್ದಾರರು ಸದಸ್ಯ ಕಾರ್ಯದರ್ಶಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಂದಾಯ ಇಲಾಖೆ(ಭೂ ಸುಧಾರಣೆ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಗೌರಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.