ಜಿಲ್ಲೆ

ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ

ಮೈಸೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ), ಮೈಸೂರು ತಾಲೂಕು ಸುಭಾಷ್ ನಗರ ವಲಯದಲ್ಲಿ 10 ಒಕ್ಕೂಟಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು.
ಉದಯಗಿರಿಯ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಮೇಯರ್ ಅಯೂಬ್‌ಖಾನ್ ಉದ್ಘಾಟಿಸಿ, ಸ್ವಸಹಾಯ ಸಂಘಗಳು ಒಳ್ಳೆಯ ಪರಿಕಲ್ಪನೆ. ಒಕ್ಕೂಟ ವ್ಯವಸ್ಥೆಗಳು ಕೂಡ ಒಳ್ಳೆಯ ಉದ್ದೇಶವಾಗಿದ್ದು, ಯೋಜನೆಯಲ್ಲಿ ಸಿಗುವಂತ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಜೀವನ ಮಟ್ಟ ಸುಧಾರಣೆ ಮಾಡಿಕೊಳ್ಳಬೇಕು. ಮಹಿಳೆಯರು ಆರ್ಥಿಕ ಬಲ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್ ಅವರು ಯೋಜನೆಯಿಂದ ಸಿಗುವಂತ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ನಗರಪಾಲಿಕೆ ಸದಸ್ಯ ಬಶೀರ ಅಹಮದ್, ಮಾಜಿ ಸದಸ್ಯ ಕೆ.ಸಿ.ಶೌಕತ್, ಶಫಿ ಅಹಮದ್ ಅವರು ವಿವಿಧ ಯೋಜನೆಗಳಡಿ ನೀಡಲಾಗುವ ಸೋಲಾರ್ ಕುಕ್ ಸ್ಟೌ, ವೃದ್ಧರ ಮಾಶಾಸನ, ಸುಜ್ಞಾನ ನಿಧಿ, ಶಿಷ್ಯವೇತನ ಸ್ವ ಉದ್ಯೋಗ ಪೂರಕವಾದ ಸಾಲದ ಮಂಜೂರಾತಿ ಪತ್ರ, ಮರಣ ಸ್ವಂತಾನ ಮಂಜೂರಾತಿ ಪತ್ರವನ್ನು ವಿತರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ನಂದಿನಿ ಶೆಟ್, ಮೇಲ್ವಿಚಾರಕರಾದ ದಿವಾಕರ್, ಮಲ್ಲಿಕಾ, ಅಶ್ವಥ್, ಸುನಿಲ್, ಶಶಿಕಲಾ ,ರಂಗಸ್ವಾಮಿ, ಭವ್ಯಾ, ಸುಭಾಷ್ ನಗರ ವಲಯದ ಸೇವಾ ಪ್ರತಿನಿಧಿಗಳು, ಸಿಎಸ್‌ಸಿ ಸೇವಾದಾರರು ಇದ್ದರು.