ಜಿಲ್ಲೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ನೂತನ ಪದಾಧಿಕಾರಿಗಳ ನೇಮಕ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಪಟ್ಟಿಯನ್ನು ರಾಜ್ಯ ಕಾರ್ಯದರ್ಶಿ ಕೆ.ಎಸ್.ಸೋಮಸುಂದರ್ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.

ಜಿಲ್ಲಾಧ್ಯಕ್ಷರಾಗಿ ಸುಂದರ್‌ಪ್ರೇಮ್‌ಕುಮಾರ್, ಉಪಾಧ್ಯಕ್ಷರಾಗಿ ಡಿ.ಪಿ.ಕೆ.ಪರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್. ಪ್ರವೀಣ್, ಕಾರ್ಯದರ್ಶಿಯಾಗಿ ಶ್ರೀವಾರಿ ನಾಗರಾಜ್, ಶ್ರೀಲೋಲ ಅಯ್ಯಂಗಾರ್, ಎಸ್.ರಘು, ಆರ್.ನಾಗರಾಜು, ಜಂಟಿ ಕಾರ್ಯದರ್ಶಿಯಾಗಿ ಎಸ್.ನಾಗೇಂದ್ರ, ಸಾಮ್ಯುಯಲ್ ಸದಾನಂದ, ಸಂಘಟನಾ ಕಾರ್ಯದರ್ಶಿಗಳಾಗಿ ಸಿ.ಕುಮಾರ, ಎಚ್.ರಾಜೇಗೌಡ, ಜಗದೀಶ್ ಹೊರಳವಾಡಿ ನೇಮಕವಾಗಿದ್ದಾರೆಂದು ತಿಳಿಸಿದರು.

ಪ್ರಾಮಾಣಿಕತೆ, ದಕ್ಷತೆ ಆಧಾರದ ಮೇಲೆ ಈ ಆಯ್ಕೆ ನಡೆದಿದೆ. ಇವರು ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರ ಪರ ಧ್ವನಿಯೆತ್ತಿ, ಸರ್ಕಾರದಿಂದ ಬರಬೇಕಾದ ಸವಲತ್ತು ದೊರಕಿಸಿಕೊಡಲಿದ್ದಾರೆಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಡಿಪಿಕೆ ಪರಮೇಶ್, ಸುಂದರ್ ಪ್ರೇಮ್‌ಕುಮಾರ್, ನಾಗೇಂದ್ರ, ರವಿಕುಮಾರ್, ಹೇಮಂತ್, ಮ.ಸ.ಪ್ರವೀಣ್ ಇದ್ದರು.