ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮಾಳಮಡ್ಡಿಯ ವನವಾಸಿ ಶ್ರೀರಾಮ ಮಂದಿರದ ಟ್ರಸ್ಟ್ಗೆ ಹೊಸದಾಗಿ 6 ಜನ ಧರ್ಮದರ್ಶಿಗಳನ್ನು ಶುಕ್ರವಾರ ನೇಮಕ ಮಾಡಲಾಗಿದೆ.
ಟ್ರಸ್ಟ್ನಲ್ಲಿ ಖಾಲಿ ಇದ್ದ 6 ಧರ್ಮದರ್ಶಿಗಳ ಸ್ಥಾನಕ್ಕೆ ಸತ್ಯಧ್ಯಾನ ಆಚಾರ್ಯ ಕಟ್ಟಿ, ಶ್ರೀನಿವಾಸ ಆಚಾರ್ಯ ಮಾನ್ವಿ, ವಾದಿರಾಜ ಆಚಾರ್ಯ ಮಠದ, ಡಾ. ಆರ್ ವೈ. ಕಟ್ಟಿ, ರೋಹಿತ್ ಪಾಟೀಲ್ ಹಾಗೂ ಕೀರ್ತಿ ಕಂಕನವಾಡಿ ಅವರನ್ನು 5 ವರ್ಷಗಳ ಅವಧಿಗೆ ಟ್ರಸ್ಟ್ ಅಧ್ಯಕ್ಷ ಆರ್.ಪಿ. ಕುಲಕರ್ಣಿ ನೇಮಕ ಮಾಡಿದ್ದಾರೆ.
ನೂತನ ಧರ್ಮದರ್ಶಿಗಳಿಗೆ ಮಂದಿರದಲ್ಲಿ ಸನ್ಮಾನಿಸಲಾಯಿತು. ಟ್ರಸ್ಟ್ ಉಪಾಧ್ಯಕ್ಷ ಹನುಮಂತ ಕೊಟಬಾಗಿ, ಧರ್ಮದರ್ಶಿಗಳಾದ ರವೀಂದ್ರ ದೇಶಪಾಂಡೆ, ಮುದ್ದು ವಿಠ್ಠಲ ಗಲಗಲಿ, ಸುಮಾ ರಾಯಚೂರು, ಇತರರು ಇದ್ದರು.