ವಿಜಯಪುರದ ಎಪಿಎಂಸಿ ಮಾರ್ಕೆಟ್ ಯಾರ್ಡ್‌ನ ಅಸೋಸಿಯೇಶನ್‌ಗೆ ಪದಾಧಿಕಾರಿಗಳ ನೇಮಕಾತಿ ನಡೆಯಿತು. ಅಧ್ಯಕ್ಷ ರವೀಂದ್ರ ಬಿಜ್ಜರಗಿ, ನಿಲೇಶ ಶಹಾ, ಪ್ರವೀಣ ವಾರದ ಮತ್ತಿತರರಿದ್ದಾರೆ. 
ಜಿಲ್ಲೆ

ಮರ್ಚಂಟ್ ಅಸೋಸಿಯೇಶನ್ ಪದಾಧಿಕಾರಿಗಳ ನೇಮಕ

ವಿಜಯಪುರ : ನಗರದ ಎಪಿಎಂಸಿ ಮಾರ್ಕೆಟ್ ಯಾರ್ಡ್‌ನ ಮರ್ಚಂಟ್ ಅಸೋಸಿಯೇಶನ್‌ನ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.

ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ನಿಲೇಶ ಶಹಾ, ಗೌರವ ಕಾರ್ಯದರ್ಶಿಯಾಗಿ ಪ್ರವೀಣ ವಾರದ, ಜಂಟಿ ಕಾರ್ಯದರ್ಶಿಯಾಗಿ ಮನೋಜ ಬಗಲಿ, ಕೋಶಾಧ್ಯಕ್ಷರಾಗಿ ಸಿದ್ದಪ್ಪ ಸಜ್ಜನ, ವ್ಯವಸ್ಥಾಪಕ ಸಮಿತಿ ಚೇರ್ಮನ್‌ರಾಗಿ ಜಯಾನಂದ ತಾಳಿಕೋಟಿ ಮತ್ತು ಕಟ್ಟಡ ಸಮಿತಿ ಚೇರ್ಮನ್‌ರಾಗಿ ರಮೇಶ ನಿಡೋಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಪ್ರಕಟಣೆಯಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.