ಧಾರವಾಡ: ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ತಹಸೀಲ್ದಾರರಾಗಿದ್ದ ಸುಧೀರ ಸಾಹುಕಾರ ಅವರನ್ನು ನವಲಗುಂದ ತಾಲೂಕು ಪ್ರಭಾರ ತಹಸೀಲ್ದಾರರಾಗಿ
ಮತ್ತು ಹುಬ್ಬಳ್ಳಿ ತಹಸೀಲ್ದಾರ್ ಕಚೇರಿಯ ಗ್ರೇಡ್- ತಹಸೀಲ್ದಾರರಾಗಿದ್ದ ಶಿವಾನಂದ ಹೆಬ್ಬಳ್ಳಿ ಅವರನ್ನು ಅಣ್ಣಿಗೇರಿ ತಾಲೂಕಿನ ಪ್ರಭಾರ ತಹಸೀಲ್ದಾರರನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಂಗಳವಾರ ಆದೇಶ ಹೊರಡಿಸಿದ್ದಾರೆ.