ಜಿಲ್ಲೆ

ಕವಿವ ಸಂಘದ ಗೌರವ ಉಪಾಧ್ಯಕ್ಷರ ನೇಮಕ

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ವಿಶೇಷ ಸಭೆಯಲ್ಲಿ ಗೌರವ ಉಪಾಧ್ಯಕ್ಷರ ನೇಮಕ ಇತ್ತೀಚೆಗೆ ನಡೆಯಿತು. ಧಾರವಾಡದ ಕಾನೂನು ತಜ್ಞ ಕೆ.ಬಿ. ನಾವಲಗಿಮಠ, ಹುಬ್ಬಳ್ಳಿಯ ಪ್ರಗತಿಪರ ಚಿಂತಕ ಡಾ. ಪಾಂಡುರ0ಗ ಪಾಟೀಲ, ಧಾರವಾಡದ ಹಿರಿಯ ವಾಗ್ಮಿ ಶ್ರೀನಿವಾಸ ವಾಡಪ್ಪಿ, ಶಿಕ್ಷಣ ತಜ್ಞ ಡಾ. ಅಜಿತ್ ಪ್ರಸಾದ ಜೈನ್ ಹಾಗೂ ಚೆನ್ನೈನ ಕನ್ನಡ ಪ್ರಾಧ್ಯಾಪಕಿ ಡಾ. ತಮಿಳ ಸೆಲ್ವಿ (ಹೊರನಾಡ ಕನ್ನಡಿಗರು) ಅವರನ್ನು 3 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಂಘದ ಅಧ್ಯಕ್ಷ ಚಂದ್ರಕಾ0ತ ಬೆಲ್ಲದ ಅವರಿಂದ ಅನುಮೋದನೆಗೊಳಿಸಲಾಯಿತು.