ಸಂಕೇಶ್ವರ: ರಾಜ್ಯದಲ್ಲಿ ಖಾಲಿ ಇರುವ ಎರಡು ಸಾವಿರ ವೈದ್ಯ ಹಾಗೂ 800 ತ ವೈದ್ಯರನ್ನು ಶ್ರೀ ನೇಮಕ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಹೇಳಿದರು.
ಪಟ್ಟಣದಲ್ಲಿ 2.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಸಮುದಾಯ ಆರೋಗ್ಯ ಕೇಂದ್ರದ ಹೆಚ್ಚುವರಿ ವಾರ್ಡ್ ಹಾಗೂ ಔಷಧ ಉಗ್ರಾಣ ಕಟ್ಟಡ ಮತ್ತು ಅಮ್ಮಣಗಿ ಗ್ರಾಮದಲ್ಲಿ 1.70 ಕೋಟಿ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅವಧಿ ಮೀರಿದ ಔಷಧ ವಿತರಣೆ ಮಾಡಿಲ್ಲ: ಹೆರಿಗೆಗಾಗಿ ಬರುವವರನ್ನು ಬೇರೆಡೆ ಕಳುಹಿಸದೆ ಸಮುದಾಯ ಆರೋಗ್ಯ ಕೇಂದ್ರದಲ್ಲೇ ಮಾಡಬೇಕು. "ನಮ್ಮ ಕ್ಲಿನಿಕ್' ಕೇಂದ್ರಗಳಿಗೆ ವೈದ್ಯರನ್ನು ನೇಮಿಸಿ ಪುನಶ್ಚೇತನ ಮಾಡಲಾಗುವುದು. ಲೋಕಾಯುಕ್ತರು ಆಪಾದಿಸಿರುವಂತೆ ಗೋಕಾಕ ಸರ್ಕಾರಿ ಆಸ್ಪತ್ರೆಯ ಔಷಧ ಮಳಿಗೆಯಲ್ಲಿ ಅವಧಿ ಮೀರಿದ ಔಷಧ ಸಾರ್ವಜನಿಕರಿಗೆ ಕೊಡುತ್ತಿರಲಿಲ್ಲ. ಬದಲಾಗಿ ಅವಧಿ ಮೀರಿದ ಔಷಧಗಳನ್ನು ವಿಲೇವಾರಿಗಾಗಿ ಪ್ರತ್ಯೇಕವಾಗಿ ಸಂಗ್ರಹಿಸಿಡಲಾಗಿತ್ತು. ಪ್ರತಿ 2 ವರ್ಷಕ್ಕೊಮ್ಮೆ ಅವಧಿ ಮೀರಿದ ಔಷಧ ವಿಲೇವಾರಿ ಮಾಡಲಾಗುತ್ತದೆ ಎಂದರು.
ಶಾಸಕ ನಿಖಿಲ ಕತ್ತಿ, ಪುರಸಭೆ ಅಧ್ಯೆ ಸೀಮಾ ಹತನೂರಿ, ಸದಸ್ಯರಾದ ಸುನೀಲ ಪರ್ತವರಾವ, ಶಿವಾನಂದ ಮುಡಸಿ, ಪ್ರಮೋದ ಹೊಸಮನಿ, ಮಹೇಶ ಹಟ್ಟಿಹೊಳಿ, ಸಚಿನ ಬೋಪಳೆ, ದಿಲೀಪ ಹೊಸಮನಿ, ಗಂಗಾರಾಮ ಭೂಸಗೋಳ, ಚಿದಾನಂದ ಕರದನ್ನವರ, ಪ್ರವಿಣ ನೇಸರಿ, ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡಾದ, ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಗಡೇದ, ತಾಲೂಕು ಆರೋಗ್ಯಾಧಿಕಾರಿ ಡಾ. ಉದಯ ಕುಡಚಿ, ಚಿಕ್ಕೋಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀಕ ನವೀನ ಗಂಗರೆಡ್ಡಿ, ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ದತ್ತಾತ್ರೇಯ ದೊಡಮನಿ, ಡಾ.ಪೂರ್ಣಿಮಾ ತಳೂರ, ಡಾ.ವಿ.ರೆಡ್ಡಿ, ಡಾ.ಶಾರದಾ ಕೆ.ವೈ. ಇತರರಿದ್ದರು.
ಹಳ್ಳಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಪದವಿ ಪೂರೈಸಿರುವ 4,000 ವೈದ್ಯರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಂಬಿಬಿಎಸ್ ಹಾಗೂ ಎಂಡಿ ಪದವಿ ಪಡೆದ ವೈದ್ಯರನ್ನು ಕ್ರಮವಾಗಿ 75 ಸಾವಿರ ರೂಪಾಯಿ ಹಾಗೂ 1.40 ಲ ರೂಪಾಯಿಗೆ ವೇತನ ಹೆಚ್ಚಿಸಿ ನೇಮಕಾತಿ ಮಾಡಲಾಗುವುದು. ದಿನೇಶ ಗುಂಡೂರಾವ, ಸಚಿವ