ಜಿಲ್ಲೆ

ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾಗಿ ನೇಮಕ

ಕೆ.ಆರ್.ನಗರ: ತಾಲೂಕಿನ ಮಾರಿಗುಡಿಕೊಪ್ಪಲು ಗ್ರಾಮದ ನಿವಾಸಿ ತಾಲೂಕು ಕುರುಬರ ಸಂಘದ ನಿರ್ದೇಶಕ ಎಂ.ಅಪ್ಪಾಜಿಗೌಡ ಅವರನ್ನು ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರನ್ನಾಗಿ ಸಾಮಾನ್ಯ ವರ್ಗದಿಂದ ಆಯ್ಕೆ ಮಾಡಲಾಗಿದೆ.

ಶಾಸಕ ಡಿ.ರವಿಶಂಕರ್ ಅವರ ಶಿಫಾರಸಿನಂತೆ ರಾಜ್ಯ ಸರ್ಕಾರ ಕೂಡಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನೇಮಕ ಮಾಡಿದೆ. ನೇಮಕಕ್ಕೆ ಕಾರಣರಾದ ಶಾಸಕ ಡಿ.ರವಿಶಂಕರ್ ಮತ್ತು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮಿಗೌಡ ಅವರಿಗೆ ಎಂ.ಅಪ್ಪಾಜಿಗೌಡರ ಅಭಿನಂದನೆ ಸಲ್ಲಿಸಿದ್ದಾರೆ.