ಕಡೂರು: ಹುಳಿಗೆರೆ ನಿಯೋಜಿತ ಪಿಡಿಒ ನಾಲ್ಕು ತಿಂಗಳಿಂದ ಯಾವುದೇ ಕೆಲಸ ಸಮರ್ಪಕವಾಗಿ ಮಾಡಿಸಿಲ್ಲ. ಅವರನ್ನು ವರ್ಗಾವಣೆ ಮಾಡಿ ಮೊದಲಿದ್ದ ಕಾಯಂ ಪಿಡಿಒ ಅವರನ್ನು ನೇಮಕ ಮಾಡಿ ಎಂದು ಗ್ರಾಪಂ ಸದಸ್ಯ ಎಚ್.ಜಿ.ಸಂತೋಷ್ ಒತ್ತಾಯಿಸಿದರು.
ಕಾಯಂ ಪಿಡಿಒ ನೇಮಕ ಮಾಡಿಕೊಡುವಂತೆ ಮಂಗಳವಾರ ತಾಪಂ ಇಒ ಸಿ.ಆರ್.ಪ್ರವೀಣ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಈಗಿರುವ ಪಿಡಿಒ ನಿರ್ಲಕ್ಷೃದಿಂದ ಬಹಳಷ್ಟು ಕೆಲಸಗಳು ಬಾಕಿ ಉಳಿದಿವೆ. ಕಸವಿಲೇವಾರಿ ಮಾಡುವ ಆಟೋ ಚಾಲಕರಿಗೆ, ನೀರುಗಂಟಿಗೆ ಸಮರ್ಪಕವಾಗಿ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಗ್ರಾಪಂಗೆ ನಿಯಮಿತವಾಗಿ ಹಾಜರಾಗುತ್ತಿಲ್ಲ ಎಂದು ದೂರಿದರು.
ಸಿ.ಆರ್.ಪ್ರವೀಣ್ ಮಾತನಾಡಿ, ಹೆಚ್ಚುವರಿ ಪಂಚಾಯಿತಿ ಜವಾಬ್ದಾರಿಯಿಂದ ಕೆಲವು ಲೋಪಗಳು ಆಗುತ್ತಿವೆ. ಪಿಡಿಒ ಸಮಸ್ಯೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ಗ್ರಾಮದ ಎಚ್.ಎನ್.ಕಲ್ಲೇಶ್, ಮಂಜುನಾಥ್ ಮುಗುಳಿಕಟ್ಟೆ ಇದ್ದರು.