ಜಿಲ್ಲೆ

ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಗೆ ಪಿಡಿಒ ನೇಮಿಸಿ

ಶೃಂಗೇರಿ: ತಾಲೂಕಿನಲ್ಲಿ ಅತಿದೊಡ್ಡ ಪಂಚಾಯಿತಿಯಾದ ವಿದ್ಯಾರಣ್ಯಪುರ ಗ್ರಾಪಂಗೆ ಕೂಡಲೇ

ಪಿಡಿಒ ನೇಮಕ ಮಾಡಬೇಕು ಎಂದು ಆಗ್ರಹಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ

ಸಮಿತಿ ತಾಪಂ ಇಒ ಸುದೀಪ್‌ಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಅವರು ಮಾತನಾಡಿ, ಸರ್ಕಾರ ಅತಿ ಹೆಚ್ಚು ಆದಾಯ

ಸಲ್ಲಿಸುತ್ತಿರುವ ವಿದ್ಯಾರಣ್ಯ ಗ್ರಾಪಂನಲ್ಲಿ ಅಭಿವೃದ್ಧಿ ಅಧಿಕಾರಿಗಳ ನೇಮಕವಾಗದಿರುವುದರಿಂದ

ಸಾರ್ವಜನಿಕರಿಗೆ ಮಾಡುತ್ತಿರುವ ಸೇವಾ ಅಪರಾಧವಾಗಿದೆ. ಜನಸಾಮಾನ್ಯರಿಗೆ ಗ್ರಾಪಂನ

ಸೇವೆ ಲಭ್ಯವಾಗುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಸರ್ಕಾರ ಮೇಲಿದೆ. ಚಿಕ್ಕ

ಗ್ರಾಪಂಗಳಲ್ಲಿ ಅಧಿಕಾರಿಗಳು ಸೇವೆಗೆ ಲಭ್ಯವಿದ್ದು, ಪಟ್ಟಣಕ್ಕೆ ಸಮೀಪವಿರುವ ಈ ಗ್ರಾಪಂಗೆ

ಕೂಡಲೇ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಬೇಕು ಎಂದ ಅವರು 15 ದಿನಗಳ ಒಳಗೆ ಪಿಡಿಒ

ಅವರನ್ನು ನೇಮಿಸಬೇಕು ಇಲ್ಲವಾದಲ್ಲಿ ಗ್ರಾಪಂಗೆ ಬೀಗ ಜಡಿದು ಉಗ್ರಹೋರಾಟ

ಮಾಡಲಾಗುವುದು ಎಂದು ಎಚ್ಚರಿಸಿದರು.

ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ,ಮಂಜುನಾಥ್, ವಿಜಯತಿಪ್ಪರಮಕ್ಕಿ,

ವೇದಿಕೆ ಉಪಾಧ್ಯಕ್ಷ ನಾಗೇಶ್‌ನಾಯ್ಕ, ಕಾರ್ಯದರ್ಶಿ ಚಂದ್ರಶೇಖರ ಗೋಳ್ಗೋಡು,

ಮಂಜುನಾಥ್ ನಾಯ್ಕ ಹಾಜರಿದ್ದರು.