ಜಿಲ್ಲೆ

ಹುಡಾ ಅಧ್ಯಕ್ಷರ ನೇಮಕಕ್ಕೆಜಾಗೃತ ನಾಗರಿಕ ವೇದಿಕೆ ಆಗ್ರಹ

Dharwada - Basavaraj Idli

ಹುಬ್ಬಳ್ಳಿ: ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡು ಮೂರು ತಿಂಗಳಾದರೂ ಹುಬ್ಬಳ್ಳಿ ಧಾರವಾಡ -ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ ಮಾಡದೇ ಇರುವುದು ದುರದೃಷ್ಟಕರ ಎಂದು ಹು-ಧಾ ಜಾಗೃತ ನಾಗರಿಕ ವೇದಿಕೆ ಸಂಚಾಲಕ ಎಚ್.ಜಿ. ದೇಸಾಯಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಯಾವುದೇ ನಿಗಮ ಮಂಡಳಿಗೆ ನೇಮಕ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ನಿಗಮ ಮಂಡಳಿಗಳಿಂದ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ದೂರಿದರು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು ಕಳೆದ 10 ವರ್ಷಗಳಿಂದ ಹೊಸ ಬಡಾವಣೆ ನಿಮಿರ್ಸಿಲ್ಲ. ಬಡವರು ಹಾಗೂ ಸಾಮಾನ್ಯ ಜನರಿಗೆ ನಿವೇಶನವಾಗಲಿ, ಮನೆಯಾಗಲಿ ನಿಮಿರ್ಸಿ ಕೊಟ್ಟಿಲ್ಲ. ಇದರಿಂದ ನಿವೇಶನ ರಹಿತರು ಸೂರಿಲ್ಲದೇ ಪರದಾಡುತ್ತಿದ್ದಾರೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರವು ರೈತರಿಂದ ಭೂಮಿ ಖರೀದಿಸಿ ವಿನ್ಯಾಸ ರಚನೆ ಮಾಡಬೇಕು. ದಶಕದಿಂದ ಇಂತಹ ಕೆಲಸ ಆಗದೇ ಹುಡಾ ರಚನೆಯ ಉದ್ದೇಶವೇ ಈಡೇರದಂತಾಗಿದೆ. ಈ ಎಲ್ಲ ಕೆಲಸಗಳಿಗೆ ಚುರುಕು ಮುಟ್ಟಿಸಲು ಪ್ರಾಧಿಕಾರಕ್ಕೆ ಕೂಡಲೇ ಅಧ್ಯಕ್ಷರನ್ನು ನೇಮಿಸಬೇಕು. ಸರ್ಕಾರ ಬಡವರ ಪರ ಕಾಳಜಿ ತೋರಬೇಕು ಎಂದು ಆಗ್ರಹಿಸಿದರು.

ಬಡವರ ಬಗ್ಗೆ ಕಾಳಜಿ ಇರುವವರು, ಸಮರ್ಪಕವಾಗಿ ಕಾರ್ಯ ನಿರ್ವಹಿಸುವವರನ್ನು ಹುಡಾ ಅಧ್ಯಕ್ಷರಾಗಿ ನೇಮಿಸಬೇಕು. ಇದರಿಂದ ಅರ್ಹರು ಸೂರು ಹೊಂದಲು ಸಾಧ್ಯವಾಗುತ್ತದೆ ಎಂದು ವೇದಿಕೆ ಪದಾಧಿಕಾರಿಗಳು ಮನವಿ ಮಾಡಿದರು.

ಭ್ರಷ್ಟಾಚಾರ ನಿಮೂರ್ಲನ ವೇದಿಕೆ ಅಧ್ಯಕ್ಷ ಅಭಿಷೇಕ ಗೋಕಾವಿ, ಆಟೋ ಚಾಲಕರ ಸಂಘದ ಕಾರ್ಯದಶಿರ್ ಪ್ರಕಾಶ ಉಳ್ಳಾಗಡ್ಡಿ ಗೋಷ್ಠಿಯಲ್ಲಿದ್ದರು.