ಮಾಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ಹನುಮಂತಗೆ ಕರುನಾಡ ವಿಜಯ ಸೇನೆ ರಾಮತ್ನಾಳ ಗ್ರಾಮ ಘಟಕ ಮನವಿ ಸಲ್ಲಿಸಿತು. ಅಧ್ಯಕ್ಷ ಸಂಗನಗೌಡ ಪಾಟೀಲ್, ಅಂದಪ್ಪ ನಾಯಕ ಇದ್ದರು. 
ಜಿಲ್ಲೆ

ಮಾಕಾಪುರ ಆಸ್ಪತ್ರೆಗೆ ವೈದ್ಯರ ನೇಮಿಸಿ

ಮುದಗಲ್: ಸಮೀಪದ ಮಾಕಾಪುರ ಪಿಎಚ್‌ಸಿಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಬೇಕೆಂದು ಒತ್ತಾಯಿಸಿ ಕರುನಾಡ ವಿಜಯ ಸೇನೆ ರಾಮತ್ನಾಳ ಗ್ರಾಮ ಘಟಕದಿಂದ ಆಸ್ಪತ್ರೆ ಉದ್ಯೋಗಿ ಹನುಮಂತ ಮೂಲಕ ಆರೋಗ್ಯ ಸಚಿವರಿಗೆ ಶನಿವಾರ ಮನವಿ ಸಲ್ಲಿಸಿತು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಗಿದೆ. ಇಲ್ಲಿ ಸೆೇವೆ ಸಲ್ಲಿಸುತ್ತಿದ್ದ ಎಂಬಿಬಿಎಸ್ ವೈದ್ಯರನ್ನು ಮುದಗಲ್ ಸಿಎಚ್‌ಸಿಗೆ ನಿಯೋಜಿಸಲಾಗಿದೆ. ಸ್ಟಾಫ್‌ನರ್ಸ್‌ಗಳ ಕೊರತೆಯಿಂದ ಚಿಕಿತ್ಸೆಗೆ ಬರಲು ರೋಗಿಗಳು ಹಿಂದೇಟು ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅಗತ್ಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಮಂಜುನಾಥ ಮಾದರ, ಕೃಷ್ಣ ಚಲುವಾದಿ, ಶರಣಗೌಡ ಪಾಟೀಲ್ ಇತರರಿದ್ದರು.