ಮಂಡ್ಯ: ಮೀನುಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಹೊಸ ಮೀನು ಕೊಳಗಳ ನಿರ್ಮಾಣ ಮತ್ತು ಹೂಡಿಕೆ ವಜ್ರಗಳು, ಒಳನಾಡಿನಲ್ಲಿ 0.10 ಹೆಕ್ಟೇರ್ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಒಳನಾಡು ಪ್ರದೇಶದಲ್ಲಿ ಎಫ್‌ಆರ್‌ಪಿ ದೋಣಿ ಖರೀದಿಗೆ ಸಹಾಯಧನ ಮತ್ತು ಶಾಖ ನಿರೋಧಕ ವಾಹನ (ಇನ್ಸುಲೇಟೆಡ್ ವಾಹನ) ಘಟಕಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಆ.22ರೊಳಗೆ ಅದೇ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.