ಜಿಲ್ಲೆ

ಪರಿಸರ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆಹ್ವಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50 ವರ್ಷದ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ ಸಂಸ್ಥೆಗಳನ್ನು ಗುರುತಿಸಿ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆ ಮಾಡಿದ ಮೂವರು ವ್ಯಕ್ತಿಗಳು ಹಾಗೂ ಮೂರು ಸಂಸ್ಥೆಗೆ ನೀಡಲಾಗುವುದು. ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆ ಚಟುವಟಿಕೆಗಳಲ್ಲಿ ಕನಿಷ್ಟ 3 ವರ್ಷ ಪೂರೈಸಿದ ವ್ಯಕ್ತಿ ಹಾಗೂ ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಹರು ಮುಚ್ಚಿದ ಲಕೋಟೆಯಲ್ಲಿ ತಮ್ಮ ಅಥವಾ ಸಂಸ್ಥೆಯ ಹೆಸರು, ವ್ಯವಹರಿಸಬೇಕಾದ ವಿಳಾಸ, ನಿರ್ವಹಿಸಲಾದ ಕಾರ್ಯ ಆರಂಭಶೀಲತೆ /ಯೋಜನೆ/ ಕಾರ್ಯಕ್ರಮಗಳ ಕುರಿತಾಗಿ ವಿವರಗಳನ್ನು ವರ್ಷವಾರು ಮತ್ತು ಕ್ಷೇತ್ರವಾರು ಪೂರಕ ದಾಖಲೆಗಳೊಂದಿಗೆ ನೀಡಬೇಕು. ವ್ಯಕ್ತಿ ಅಥವಾ ಸಂಸ್ಥೆಗಳು ಪರಿಸರ ಸಂರಕ್ಷಣೆಗಾಗಿ ನಿರ್ವಹಿಸಲಾಗಿರುವ ಕಾರ್ಯ ಅವಧಿ ಮತ್ತು ಸಾಧನೆ ಕುರಿತು ಮಾಹಿತಿ, ಪ್ರಶಸ್ತಿಗೆ ಸೂಚಿಸಲಾಗಿರುವ ಕಾರ್ಯ ಆರಂಭಶೀಲತೆ ಯೋಜನೆ ಕಾರ್ಯಕ್ರಮಗಳ ನಿರ್ವಹಣೆಗಾಗಿ ವಿನಿಯೋಗಿಸಲಾಗಿರುವ ಹಣ ಮತ್ತು ಆರ್ಥಿಕ ಸಹಾಯದ ಮೂಲಗಳು(ಪಡೆದಿದ್ದಲ್ಲಿ) ಈವರೆಗೆ ಪಡೆದಿರುವ ಪ್ರಶಸ್ತಿ ವಿವರ, ಪ್ರತಿಪಾದನೆಯ ಕುರಿತು ಸಾಕ್ಷಾಧಾರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅ.20ರೊಳಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ನಂ.ಡಿ.3/3364/ಕೆ.ಎಲ್.ನಂ.934, ಪಿಇಎಸ್ ಇಂಜಿನಿಯರಿಂಗ್ ಕಾಲೇಜು ರಸ್ತೆ, ಮಂಡ್ಯ ಇಲ್ಲಿಗೆ ಅಂಚೆ ಸ್ವೀಕೃತಿ, ಸ್ಪೀಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ಮಾತ್ರ ಸಲ್ಲಿಸಬಹುದೆಂದು ಪ್ರಕಟಣೆ ತಿಳಿಸಿದೆ.