ಜಿಲ್ಲೆ

ಸಹಾಯಧನಕ್ಕೆ ಅರ್ಜಿ ಸಲ್ಲಿಸಿ

ಚಿಂತಾಮಣಿ: ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಪ್ರತಿ ಹೆಕ್ಟೇರ್ ಮಾವು 4 ಸಾವಿರ ರೂ., ದಾಳಿಂಬೆ 6350 ರೂ., ದ್ರಾಕ್ಷಿ 14 ಸಾವಿರ ರೂ. ವಿಮೆ ನೋಂದಣಿಗೆ ಜು.31ರ ಒಳಗೆ ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹವಾಮಾನ ಆಧಾರಿತ ಘಟಕ(ಸಾಮಾನ್ಯ ವರ್ಗ-01 ಹಾಗೂ ಪ.ಜಾತಿ-01 ಸಂಖ್ಯೆಗಳ ಗುರಿ) 20 ಸಾವಿರ ರೂ. ಸಹಾಯಧನ, ಕಡಿಮೆ ವೆಚ್ಚ, ಹಣ್ಣು ಮಾಗಿಸುವ ಘಟಕ (ಸಾಮಾನ್ಯ ವರ್ಗ-150, ಪ.ಜಾತಿ-50 ಹಾಗೂ ಪ.ಪಂಗಡ-15 ಸಂಖ್ಯೆಗಳ ಗುರಿ)-3,250 ರೂ. ಸಹಾಯಧನ ಹಾಗೂ ಸಮಾಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಣಬೆ ಉತ್ಪಾದನೆ ಘಟಕ(ಸಾಮಾನ್ಯ ವರ್ಗ-01 ಗುರಿ)-1 ಲಕ್ಷ 50 ಸಾವಿರ ರೂ. ಸಹಾಯಧನ ಘಟಕಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಚಿಂತಾಮಣಿ ತೋಟಗಾರಿಕೆ ಕಚೇರಿಯಲ್ಲಿ ನೀಡಲು ಮನವಿ ಮಾಡಲಾಗಿದೆ.