ಜಿಲ್ಲೆ

ಶರಣ ಹರಳಯ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಮಾರ್ಕಂಡೇಯ ದೊಡಮನಿ ಶಿಕ್ಷಣ ಸಮಿತಿ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಗಾರ ಹರಳಯ್ಯ ಸಮಾಜದ ವಿದ್ಯಾರ್ಥಿಗಳಿಗೆ ಶರಣ ಹರಳಯ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 70, ಪಿಯುಸಿ, ಬಿ.ಎ, ಬಿ.ಕಾಂ, ಬಿಎಡ್, ಬಿಇ, ಎಂಎ, ಎಂ.ಎಸ್‌ಸಿ, ಎಂಬಿಬಿಎಸ್‌ನಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಆ. 8ರೊಳಗೆ ಮಾರ್ಕಂಡೇಯ ದೊಡಮನಿ, ಶಿಕ್ಷಣ ಸಮಿತಿ ಮತ್ತು ಚಾರಿಟೇಬಲ್ ಟ್ರಸ್ಟ್, ಆತ್ಮಾನಂದ ಕುಟೀರ 19, ಜಯನಗರ 2ನೇ ಕ್ರಾಸ್,ಧಾರವಾಡ ಈ ವಿಳಾಸಕ್ಕೆ ಆ. 8ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.