ಜಿಲ್ಲೆ

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಾಗುರು ಎಜುಕೇಶನಲ್​ ಟ್ರಸ್ಟ್​ ವತಿಯಿಂದ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

2024-25ರಲ್ಲಿ ದ್ವೀತಿಯ ಪಿಯುಸಿ ಉತ್ತೀರ್ಣರಾಗಿ ಪದವಿ/ಡಿಪ್ಲೋಮಾ ಸೇರ ಬಯಸುವ ವಿದ್ಯಾರ್ಥಿಗಳು ಕನಿಷ್ಠ ಶೇ. 85 ಅಂಕ ಪಡೆದಿರಬೇಕು. ಪ್ರಸ್ತುತ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ದ್ವೀತಿಯ ಪಿಯುಸಿಯಲ್ಲಿ ಶೇ. 85, ಪದವಿಯಲ್ಲಿ ಶೇ. 60ರಷ್ಟು ಅಂಕ ಪಡೆದಿರಬೇಕು. ಹಿಂದಿನ ವರ್ಷ/ಸೆಮಿಸ್ಟರ್​ನಲ್ಲಿ ಅನುತ್ತೀರ್ಣರಾಗಿರಬಾರದು. ಆಸಕ್ತರು ((mahagurutrust.com)) ವೆಬ್​ಸೈಟ್​ನಲ್ಲಿ ಅರ್ಜಿ ಪಡೆದು ಜೂ. 15ರೊಳಗೆ ಆನ್​ಲೈನ್​ ಮೂಲಕ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.