ಧಾರವಾಡ: ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿ0ದ ಜಿಲ್ಲೆಯ ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಸುರಕ್ಷತಾ ಗೌಂಡಿ ಕಿಟ್, ಸುರಕ್ಷತಾ ಇಲೆಕ್ಟಿçಷಿಯನ್, ಸುರಕ್ಷತಾ ವೆಲ್ಡರ್, ಸುರಕ್ಷತಾ ಕಾರ್ಪೆಂಟರ್, ಸುರಕ್ಷತಾ ಪೇಂಟರ್, ಸುರಕ್ಷತಾ ಪ್ಲಂಬರ್ ಕಿಟ್‌ಗಳನ್ನು ವಿತರಿಸಲಾಗುವುದು. ಆಸಕ್ತರು ನ. 15ರೊಳಗೆ ಆಯಾ ತಾಲೂಲು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.