ಜಿಲ್ಲೆ

ಅರ್ಜಿ ಸಲ್ಲಿಕೆಗೆ ಹಣ ನೀಡಬೇಕಿಲ್ಲ

ಪ್ರಶಾಂತ ಹೂಗಾರ

ಅಥಣಿ ಗ್ರಾಮೀಣ: ಗೃಹಲಕ್ಷ್ಮೀ ಯೋಜನೆಗೆ ನಿಗದಿಪಡಿಸಿದ ದಿನಾಂಕದಂದು ಸರತಿ ಸಾಲಿನಲ್ಲಿ ನಿಂತು ಶಾಂತ ರೀತಿಯಿಂದ ಅರ್ಜಿ ಸಲ್ಲಿಸಬೇಕು ಎಂದು ಅಥಣಿ ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಹೇಳಿದರು.

ಕೊಕಟನೂರ ಗ್ರಾಮದ ಗ್ರಾಮ ಒನ್ ಕೇಂದ್ರಕ್ಕೆ ಅಥಣಿ ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಭೇಟಿ ನೀಡಿದರು. ಮುಬಾರಕ್ ಮುಜಾವರ್, ಕಲ್ಮೇಶ ಕಲಮಡಿ, ಪ್ರಶಾಂತ ಬಡಿಗೇರ, ಸುಧಾಕರ ಚವ್ಹಾಣ ಇದ್ದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಗ್ರಾಮ ಒನ್ ಹಾಗೂ ಬಾಪೂಜಿ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ ಅರ್ಜಿದಾರರೊಂದಿಗೆ ಮಾತನಾಡಿ, ಗೃಹಲಕ್ಷ್ಮೀ ಫಲಾನುಭವಿಗಳು ಅರ್ಜಿ ಸಲ್ಲಿಸಲು ಯಾವುದೇ ಕೇಂದ್ರದಲ್ಲಿ ಹಣ ನೀಡಬಾರದು. ಹಣ ಕೇಳಿದರೆ ಕಂದಾಯ ಇಲಾಖೆಗೆ ತಿಳಿಸಬೇಕು. ಆಧಾರ್ ಲಿಂಕ್ ಮಾಡಿದ ಮೊಬೈಲ್ ನಂಬರ್ ಕಳೆದುಕೊಂಡವರು ಕಂದಾಯ ಇಲಾಖೆಯನ್ನು ಸಂಪರ್ಕಿಸಿದರೆ ಸರಿಪಡಿಸಲಾಗುವುದು.

ಕರ್ನಾಟಕ ಒನ್ ಸೇವಾ ಕೇಂದ್ರಗಳಿಲ್ಲದವರು ಸಮೀಪದ ಗ್ರಾಮ ಒನ್‌ನಲ್ಲಿ ಅರ್ಜಿ ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದರು. ಕಂದಾಯ ನಿರೀಕ್ಷಕ ಮುಬಾರಕ್ ಮುಜಾವರ್, ಗ್ರಾಮಾಡಳಿತಾಕಾರಿ ಕಲ್ಮೇಶ ಕಲಮಡಿ, ಪ್ರಶಾಂತ ಬಡಿಗೇರ, ಸುಧಾಕರ ಚವ್ಹಾಣ, ಸುರೇಖಾ ಸಂಕ್ರಟ್ಟಿ ಇತರರಿದ್ದರು.