ಜಿಲ್ಲೆ

ವಿವಿಧ ಕಾಯರ್ಯಕ್ರಮಗಳಡಿ ಅರ್ಜಿ ಆಹ್ವಾನ

ಅವಿನಾಶ್ ಜೈನಹಳ್ಳಿ

ಮೈಸೂರು: 2023-24 ಮತ್ತು 2024-25ನೇ ಸಾಲಿನ ಶೇ.24.10ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಅನ್ವಯವಾಗುವಂತೆ ಮತ್ತು ಶೇ.7.25 ರಡಿ ಇತರೆ ಹಿಂದುಳಿದ ಬಡಜನರ ಶೇ.5 ರ ಯೋಜನೆಯಡಿ ವಿಶೇಷ ಚೇತನರಿಗೆ ಅನ್ವಯವಾಗುವಂತೆ ವೈಯಕ್ತಿಕ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶೇ.24.10ರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪೌರಕಾರ್ಮಿಕರ ಕಾರ್ಯಕ್ರಮ, ಶೇ 7.25 ಇತರೆ ಬಡಜನರ ವೈಯಕ್ತಿಕ ಕಾರ್ಯಕ್ರಮ, ಶೇ.5 ಇತರೆ ಬಡಜನರ ವೈಯಕ್ತಿಕ ಕಾರ್ಯಕ್ರಮಗಳಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಉಚಿತವಾಗಿ ಎಲ್ಲಾ ವಲಯ ಕಛೇರಿಗಳಲ್ಲಿ ವಿತರಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ನಿಗಧಿತ ಮಾದರಿ ನಮೂನೆಯಲ್ಲಿ ಅಗತ್ಯ ದಾಖಲಾತಿಗಳಾದ ಚಾಲ್ತಿಯಲ್ಲಿರುವ ಜಾತಿ, ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ/ಪಡಿತರಚೀಟಿ, ವಾಸ ಸ್ಥಳದ ದಾಖಲೆ, ಆಧಾರ್ ಪ್ರಮಾಣ ಪತ್ರ ಮತ್ತು ರೂ.20 ಗಳ ಚಾಪಾ ಕಾಗದದಲ್ಲಿ ಸಂಪೂರ್ಣ ವಿವರಗಳನ್ನು ನಮೂದಿಸಿ ನೋಟರಿಯವರ ಮುಂದೆ ಪ್ರಮಾಣಿಸಿ ಕಾರ್ಯಕ್ರಮವಾರು ನಿಗಧಿಯಾಗಿರುವ ಹೆಚ್ಚುವರಿ ದಾಖಲೆಗಳೊಂದಿಗೆ (ವಿಶೇಷ ಚೇತನರಾಗಿದ್ದಲ್ಲಿ ವಿಶೇಷ ಚೇತನರ ಪ್ರಮಾಣ ಪತ್ರ, ಪಕ್ಕಾಮನೆ ಸೌಲಭ್ಯಕ್ಕಾಗಿ (ರೆವಿನ್ಯೂ ನಿವೇಶನ ಹೊರತು ಪಡಿಸಿ) ಫಲಾನುಭವಿಯ ಖಾತಾ ಮತ್ತು ಇ.ಸಿ ಯೊಂದಿಗೆ ಮಹಾನಗರ ಪಾಲಿಕೆಯ ವಲಯ ಕಛೇರಿಗಳಲ್ಲಿ ನೇರವಾಗಿ ಅರ್ಜಿಯನ್ನು ಆಗಸ್ಟ್ 19 ರೊಳಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ ಮತ್ತು ಕೇಂದ್ರ ಕಛೇರಿಯ ಬಡತನ ನಿರ್ಮೂಲನಾ ಶಾಖೆಯನ್ನು ಸಂಪರ್ಕಿಸಬಹುದು ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.