ಜಿಲ್ಲೆ

ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಹಿಳಾ ಸಬಲೀಕರಣ ಕೇಂದ್ರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೈಸೂರು: ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಹಿಳಾ ಸಬಲೀಕರಣ ಕೇಂದ್ರದ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ಮಿಷನ್ ಸಂಯೋಜಕರು ವಿದ್ಯಾರ್ಹತೆ: ಸಮಾಜ ವಿಜ್ಞಾನ/ ಜೀವ ವಿಜ್ಞಾನ / ಪೋಷಣೆ / ಔಷಧ / ಆರೋಗ್ಯ ನಿರ್ವಹಣೆ / ಸಾಮಾಜಿಕ ಕಾರ್ಯ / ಗ್ರಾಮೀಣ ನಿರ್ವಹಣೆ ಈ ವಿಷಯಗಳಲ್ಲಿ ಪದವೀಧರರು ಹಾಗೂ ಸಂಬoಧಿತ ಡೊಮೇನ್‌ನಲ್ಲಿ ಸರ್ಕಾರ / ಸರ್ಕಾರೇತರ ಸಂಸ್ಥೆಗಳಲ್ಲಿ 3 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು.

ಆರ್ಥಿಕ ಸಾಕ್ಷರತೆಯಲ್ಲಿ ತಜ್ಞ ಮತ್ತು ಲೆಕ್ಕಪರಿಶೋಧಕ ಹುದ್ದೆಗೆ ವಿದ್ಯಾರ್ಹತೆ: ಅರ್ಥ ಶಾಸ್ತ್ರ/ ಬ್ಯಾಂಕಿoಗ್/ಇತರ ವಿಭಾಗಗಳಲ್ಲಿ ಪದವೀಧರ, ಸ್ನಾತಕೋತ್ತರ ಪದವೀಧರರಿಗೆ ಆದ್ಯತೆ ನೀಡಲಾಗುವುದು. ಹಣಕಾಸು ಸಾಕ್ಷರತೆ/ಹಣಕಾಸಿನ ಒಳಗೊಳ್ಳುವಿಕೆ ಕೇಂದ್ರೀಕೃತ ವಿಷಯಗಳಲ್ಲಿ ಸರ್ಕಾರ/ಸರ್ಕಾರೇತರ ಸಂಸ್ಥೆಗಳಲ್ಲಿ 3 ವರ್ಷ ಕೆಲಸದ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಹುದ್ದೆಗೆ ನಿಗಧಿಪಡಿಸಿದ ಹಾಗೂ ವಿದ್ಯಾರ್ಹತೆಯ ಅಂಕಪಟ್ಟಿಗಳು, ಅನುಭವ ಪ್ರಮಾಣ ಪತ್ರಗಳು ಮತ್ತು ಕನಿಷ್ಠ 06 ತಿಂಗಳ ಕಂಪ್ಯೂಟರ್ ತರಬೇತಿ ಪಡೆದಿರುವ ಪ್ರಮಾಣ ಪತ್ರದೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ವಿಜಯನಗರ 2ನೇ ಹಂತದ ಕೃಷ್ಣದೇವರಾಯ ಸರ್ಕಲ್‌ ನ ಸ್ತ್ರೀ ಶಕ್ತಿ ಭವನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಛೇರಿಗೆ ಮಾ. 27 ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಮಾ. 27 ರೊಳಗೆ ಕಛೇರಿಯ ವೇಳೆಯಲ್ಲಿ ಪಡೆಯಬಹುದಾಗಿದೆ.