ಮೈಸೂರು: ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ (ಕಾವಾ) 2022-23ನೇ ಶೈಕ್ಷಣಿಕೆ ಸಾಲಿಗೆ ಸಂಬಂಧಿಸಿದಂತೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಅವಧಿ ಮೇರೆಗೆ ಬೋಧನೆ ಮಾಡಲು ಇಚ್ಛಿಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆ.7 ಕಡೆಯ ದಿನ. ಸೆ.9 ರಂದು ಸಂದರ್ಶನ ನಡೆಸಲಾಗುವುದು. ಮಾಹಿತಿಗೆ ದೂ: 0821-2438931 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.