2023-24 ನೇ ಸಾಲಿನಲ್ಲಿ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿಗಳನ್ನು ಕೃಷಿ ಕ್ಷೇತ್ರ, ತೋಟಗಾರಿಕೆ ಕ್ಷೇತ್ರ, ಪಶುಸಂಗೋಪನೆ ಕ್ಷೇತ್ರ, ಮೀನುಗಾರಿಕೆ, ರೇಷ್ಮೆ ಕೃಷಿ, ಅರಣ್ಯ ಕೃಷಿ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ರೈತರನ್ನು ಗರುತಿಸಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿಗಳಲ್ಲಿ ಆಯ್ಕೆಯಾದ ಪ್ರಥಮ ಸ್ಥಾನಕ್ಕೆ 1,25,000 ರೂ. ನಗದು, ದ್ವಿತೀಯ ಸ್ಥಾನಕ್ಕೆ 1,00,000 ರೂ. ಮತ್ತು ತೃತೀಯ ಸ್ಥಾನಕ್ಕೆ 75,000 ರೂ. ನಗದು, ಉಳಿದಂತೆ ರಾಜ್ಯದ 10 ರೈತರಿಗೆ (ಕೃಷಿ ಪಂಡಿತ ಉದಯೋನ್ಮುಖ ಎಂದು ತಲಾ 50,000 ರೂ. ದಂತೆ) ಆಯ್ಕೆ ಸಮಿತಿಯ ತೀರ್ಮಾನದಂತೆ ನೀಡಲಾಗುವುದು.
ಅರ್ಹ ಆಸಕ್ತ ರೈತರು, ರೈತ ಮಹಿಳೆಯರು ಸಂಬoಧಪಟ್ಟ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜುಲೈ 24 ರೊಳಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಮೈಸೂರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.