ಜಿಲ್ಲೆ

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಜಿಲ್ಲಾ ವ್ಯಾಪ್ತಿಯ ಗಂಗಾಮತ ಹಾಗೂ ಪರ್ಯಾಯ ಜಾತಿ ಹೆಸರಿನ ವಿದ್ಯಾರ್ಥಿಗಳಿಗೆ 2024ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿ೦ದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಆರ್​. ಆರ್​. ಬಾರಕೇರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಗಂಗಮತಸ್ಥರ ಹಿತರಕ ಸಂಘದ ವತಿಯಿಂದ ವಿದ್ಯಾವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಆಸಕ್ತರು ಜು. 25 ರೊಳಗೆ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಆಧಾರ್​ ಕಾರ್ಡ್​, ಎರಡು ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಆರ್​.ಆರ್​. ಬಾರಕೇರ, ಓಂ ಸಾಯಿ, ನಂ. 177 ಬಿ. ಬ್ಲಾಕ್​, ಹನುಮಂತನಗರ ಅತ್ತಿಕೊಳ್ಳ ಧಾರವಾಡ-580003 ವಿಳಾಸಕ್ಕೆ ಕಳುಹಿಸಬೇಕು ಎಂದರು.
ಸಂಘದ ಅಧ್ಯಕ್ಷ ಅರವಿಂದ ಏಗನಗೌಡರ, ಮಹಾದೇವ ಕರ್ಜಗಿ, ಉಮಾ ಬಳ್ಳಾರಿ, ಕಸ್ತೂರಿ ಬುರ್ಲಿ, ಜಯಶ್ರೀ ಬಳ್ಳಾರಿ, ಇತರರು ಇದ್ದರು.