ಜಿಲ್ಲೆ

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಗಿರೀಶ ಸಗರ

ವಿಜಯಪುರ : ತಳವಾರ ಸಮಾಜದ ಪ್ರತಿಭಾ ಪುರಸ್ಕಾರ ಸಮಿತಿ ವತಿಯಿಂದ 2024&25ನೇ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್​ 17 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಅರ್ಜಿ ಸಲ್ಲಿಸಲು ಜು. 31 ಕೊನೆಯ ದಿನವಾಗಿದೆ.

ಅರ್ಹ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಅಂಕಪಟ್ಟಿ, ಆಧಾರ್​ ಕಾರ್ಡ್​ಗಳ ನಕಲು ಪ್ರತಿ ಹಾಗೂ ಇತ್ತೀಚಿನ ಎರಡು ಫೊಟೋಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಅಂಚೆ ಮೂಲಕ ಅಥವಾ ಖುದ್ದಾಗಿ ನಗರದ ಬಸ್​ ನಿಲ್ಧಾಣ ಬಳಿಯ ಲಲಿತ ಮಹಲ್​ ಹೊಟೆಲ್​ ಆವರಣದಲ್ಲಿರುವ ಾನಗಂಗಾ ವಿವಿದೊದ್ದೇಶ ಸಹಕಾರ ಸಂ, ಗಾಂಧಿ ಚೌಕ್​ ಬಳಿಯ ಹಳೆಯ ಪುಸ್ತಕ ಅಂಗಡಿಗೆ ಹಾಗೂ ಮೀನಾ ಚೌಕ ಬಳಿಯ ಮಧುರಾ ಬಟ್ಟೆ ಅಂಗಡಿಯಲ್ಲಿ ಅರ್ಜಿ ಸಲ್ಲಿಸಬೇಕೆಂದು ಸಮೀತಿ ಅಧ್ಯ ಎಸ್​.ಎಂ. ಕಣಬೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.