ಜಿಲ್ಲೆ

ಕೊಡಗು ಪ್ರೆಸ್ ಕ್ಲಬ್ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

reportermys

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಮೇ೧೫ ಕೊನೆ ದಿನ ಎಂದು ಪ್ರಧಾನ ಕಾರ್ಯದರ್ಶಿ ರೆಜಿತ್‌ಕುಮಾರ್ ಗುಹ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕ್ಲಬ್‌ನ ಸಾಮಾನ್ಯ ಸದಸ್ಯರಾಗುವವರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಸಂಪಾದಕರು ಅಥವಾ ಜಿಲ್ಲಾ ವರದಿಗಾರರಿಂದ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯ. ಸದಸ್ಯರಾಗುವವರು ಪತ್ರಕರ್ತರಾಗಿರುವುದು ಹಾಗೂ ಪತ್ರಿಕಾ ಕಾರ್ಯಾಲಯದಲ್ಲಿ ಇರುವುದು ಕಡ್ಡಾಯವಾಗಿದೆ. ಸಾಮಾನ್ಯ ಸದಸ್ಯರಾಗುವವರು ಕಡ್ಡಾಯವಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ/ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ/ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯದಿದ್ದರೇ ಕ್ಲಬ್‌ನ ಆಜೀವ ಸದಸ್ಯತ್ವ ಮತ್ತು ಸಾಮಾನ್ಯ ಸದಸ್ಯತ್ವ ರದ್ದಾಗುತ್ತದೆ ಎಂದು ತಿಳಿಸಿದ್ದಾರೆ.


ಸಾಮಾನ್ಯ ಸದಸ್ಯತ್ವಕ್ಕೆ ವೃತ್ತಿನಿರತ ಪತ್ರಕರ್ತರು, ಪತ್ರಿಕಾ ಸಂಪಾದಕರು, ಉಪಸಂಪಾದಕರು, ಪತ್ರಿಕಾ ಅಧಿಕೃತ ಛಾಯಾಚಿತ್ರಕಾರರು, ಮಾಧ್ಯಮ ಪ್ರತಿನಿಧಿಗಳು, ವ್ಯವಸ್ಥಾಪಕ ಸಂಪಾದಕರು, ಪತ್ರಿಕಾ ಮಾಲೀಕತ್ವ ಹೊಂದಿರುವ ಸಂಪಾದಕರು ಅರ್ಜಿ ಸಲ್ಲಿಸಬಹುದು. ಆಜೀವ ಸದಸ್ಯತ್ವಕ್ಕೆ ಕ್ಲಬ್‌ನ ಸಾಮಾನ್ಯ ಸದಸ್ಯರಾಗಿ ಸತತ ನಾಲ್ಕು ಬಾರಿ ನವೀಕರಿಸಿದ ಸದಸ್ಯ ಆಜೀವ ಸದಸ್ಯರಾಗುತ್ತಾರೆ.

ಆಜೀವ ಸದಸ್ಯತ್ವಕ್ಕೆ ೨ ಸಾವಿರ ರೂಪಾಯಿ, ಸಾಮಾನ್ಯ ಮತ್ತು ಸಹ ಸದಸ್ಯತ್ವಕ್ಕೆ ೫೮೦ ರೂಪಾಯಿ ಶುಲ್ಕ ಪಾವತಿಸಬೇಕು. ಆಜೀವ ಸದಸ್ಯತ್ವ ನವೀಕರಣಕ್ಕೆ ೧೦೦ ರೂಪಾಯಿ ಶುಲ್ಕ ಪಾವತಿಸಬೇಕು. ಪ್ರೆಸ್ ಕ್ಲಬ್ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಬಳಿಕ ಎರಡು ಭಾವಚಿತ್ರದೊಂದಿಗೆ ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು. ಮೇ೨೦ ರಂದು ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಸದಸ್ಯತ್ವ ಪರಿಶೀಲನೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ರೆಜಿತ್‌ಕುಮಾರ್ ಗುಹ್ಯ ತಿಳಿಸಿದ್ದಾರೆ.