ಜಿಲ್ಲೆ

ನೀರಾವರಿ ಸಬ್ಸಿಡಿಗಾಗಿ ಅರ್ಜಿ ಆಹ್ವಾನ

Avinash R

ಕಾಸರಗೋಡು: ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನವೀನ ನೀರಾವರಿ ವಿಧಾನಗಳನ್ನು ಪ್ರೋತ್ಸಾಹಿಸುವ, ನೀರಿನ ದಕ್ಷತೆಯ ಹೆಚ್ಚಿಸುವ, ಹೆಚ್ಚಿನ ಉತ್ಪಾದನೆಯನ್ನು ಖಾತ್ರಿಪಡಿಸುವ ಗುರಿಯೊಂದಿಗೆ ಕೃಷಿ ಇಲಾಖೆಯಿಂದ ಜಾರಿಗೆ ತಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(ಆರ್.ಕೆ.ವಿ.ವೈ-ಪಿ.ಡಿ.ಎಂ.ಎಸ್) ಮೂಲಕ ಡ್ರಿಪ್ ಕೃಷಿ ಸ್ಥಳಗಳಲ್ಲಿ ಸಬ್ಸಿಡಿ ಅಳವಡಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಣ್ಣ ರೈತರಿಗೆ ಯೋಜನಾ ವೆಚ್ಚದ ಮಂಜೂರಾದ ಮೊತ್ತದ 55 ಶೇ. ಮತ್ತು ಇತರ ರೈತರಿಗೆ ಯೋಜನೆಯ ವೆಚ್ಚದ ಶೇ.45ರಷ್ಟು ಮೊತ್ತವನ್ನು ಯೋಜನಾ ಷರತ್ತುಗಳೊಂದಿಗೆ ನೀಡಲಾಗುವುದು. ಅರ್ಜಿ ಜಿಲ್ಲೆಯ ಕೃಷಿ ಭವನ ಮತ್ತು ಕೃಷಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಲಭ್ಯವಿದೆ. ಮಾಹಿತಿಗಾಗಿ ಕಾಸರಗೋಡು ಜಿಲ್ಲೆಯ ಕೃಷಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಅಥವಾ ಸ್ಥಳೀಯ ಕೃಷಿ ಭವನ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 9895050917, 9048183643, 7736421546.