ಜಿಲ್ಲೆ

ಸಹಾಯಧನಕ್ಕೆ ಅರ್ಜಿ ಆಹ್ವಾನ

Davangere - Desk - Mahesh Babu E

ಹಿರಿಯೂರು: ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ತೋಟಗಾರಿಕೆ ಬೆಳೆಗಳಾದ ಬಾಳೆ, ದಾಳಿಂಬೆ, ಸೀಬೆ, ಬಿಡಿ ಹೂವು ಬೆಳೆಗಳನ್ನು ಹೊಸದಾಗಿ ಬೆಳೆಯಲು ಸಹಾಯಧನ ನೀಡಲಾಗುವುದು.

ಸಂರಕ್ಷಿತ ಬೇಸಾಯ ಕಾರ್ಯಕ್ರಮ, ತೋಟಗಾರಿಕೆ ಬೆಳೆಗಳಿಗೆ ಪ್ಲಾಸ್ಟಿಕ್ ನೆಲ ಹೊದಿಕೆ, ವೈಯಕ್ತಿಕ ಕೃಷಿ ಹೊಂಡ, ಸಾಮೂಹಿಕ ಕೃಷಿ ಹೊಂಡ, ಈರುಳ್ಳಿ ಸಂಗ್ರಹಣಾ ಘಟಕ, ಪ್ಯಾಕ್ ಹೌಸ್‌ಗೆ ಸಹಾಯಧನ ಪಡೆಯಲು ರೈತರು ಅರ್ಜಿಯನ್ನು ಸೆ. 16ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಹಿರಿಯ ನಿರ್ದೇಶಕ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.