ಮೈಸೂರು: ಕರ್ನಾಟಕ ಸರ್ಕಾರದ ಎಐಟಿಟಿ, ಎಸ್ ಸಿಪಿ ಮತ್ತು ಟಿ ಎಸ್ ಪಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಯುವಕ ಯುವತಿಯರಿಗೆ ಉದ್ಯೋಗ ಆಧಾರಿತ ಉಚಿತ ತಾಂತ್ರಿಕ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಟೂಲ್ ಡಿಸೈನ್ನಲ್ಲಿ ಪೋಸ್ಟ್ ಡಿಪ್ಲೊಮಾ ತರಬೇತಿಗೆ ಡಿಪ್ಲೊಮಾ/ಬಿಇ (ಎಂಇ/ಎಇ/ಐಪಿ/ಡಿಟಿಡಿಎo/ಡಿಪಿಎo) ವಿದ್ಯಾರ್ಹತೆ, ಟೂಲ್ ರೂಮ್ ಮೆಷಿನಿಸ್ಟ್ ತರಬೇತಿಗೆ ಎಸ್.ಎಸ್.ಎಲ್.ಸಿ, ಟೂಲ್ & ಡೈ ಮೇಕರ್ ತರಬೇತಿಗೆ ಎಸ್. ಎಸ್ .ಎಲ್ .ಸಿ ಮತ್ತು ಐಟಿಐ, ಸಿಎನ್‌ಸಿ ಟೆಕ್ನೋಲಜಿ ಮತ್ತು ಸಿಎಮ್‌ಎಮ್ ತರಬೇತಿಗೆ ಐಟಿಐ/ಡಿಪ್ಲೊಮಾ, ಡಿಸೈನರ್ ಮೆಕ್ಯಾನಿಕಲ್(ಸಿಎಡಿ-ಸಿಎಎಮ್) ತರಬೇತಿಗೆ ಡಿಪ್ಲೊಮಾ ಅಥವಾ ಬಿಇ, ಎಲೆಕ್ಟ್ರಿಷಿಯನ್ ತರಬೇತಿಗೆ ಎಸ್.ಎಸ್.ಎಲ್.ಸಿ ಅಥವಾ ಐಟಿಐ, ಕನ್ವೆನ್ಶನಲ್ ಮಷೀನ್ಸ್ ಮತ್ತು ಕ್ವಾಲಿಟಿ ಕಂಟ್ರೋಲ್ಸ್ ತರಬೇತಿಗೆ ಎಸ್.ಎಸ್.ಎಲ್.ಸಿ ಅಥವಾ ಐಟಿಐ, ಸಿಎನ್‌ಸಿ ಮೆಷಿನ್ ಆಪರೇಟರ್ (ಟರ್ನರ್/ಮಿಲ್ಲರ್) ತರಬೇತಿಗೆ ಎಸ್.ಎಸ್.ಎಲ್.
ಸಿ ಅಥವಾ ಐಟಿಐ, ಉತ್ಪನ್ನ ವಿನ್ಯಾಸ ಎಂಜಿನಿಯರ್ ಸಿಎಡಿ-ಸಿಎಎಂ ತರಬೇತಿಗೆ ಡಿಪ್ಲೊಮಾ ಅಥವಾ ಬಿಇ, ಕ್ವಾಲಿಟಿ ಇನ್ಸ್ಪೆಕ್ಟರ್ ತರಬೇತಿಗೆ ಐಟಿಐ ಅಥವಾ ಡಿಪ್ಲೊಮಾ ಹಾಗೂ ಸಿಎನ್‌ಸಿ ಪ್ರೋಗ್ರಾಮರ್ – ವಿಎಂಸಿ ಮತ್ತು ಟರ್ನಿಂಗ್ ತರಬೇತಿಗೆ ಡಿಪ್ಲೊಮಾ ಅಥವಾ ಬಿ.ಇ ವಿದ್ಯಾರ್ಹತೆಯನ್ನು ಹೊಂದಿರುವ 16 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9945442654/9980615384 ಅನ್ನು ಸಂಪರ್ಕಿಸಬಾಹುದು ಎಂದು ಜಿ.ಟಿ.ಟಿ.ಸಿ ಕೇಂದ್ರದ ಸಿ.ಒ.ಇ-ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.