ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ನೀಡಲು ಪೊಲೀಸ್ ಕಲ್ಯಾಣ ನಿಧಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಲಿಪಿಕ ಸಿಬ್ಬಂದಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಮಾಹಿತಿಯನ್ನು ಎಕ್ಸೇಲ್ ಾರ್ಮೆಟ್ ನಲ್ಲಿ ಭರ್ತಿ ಮಾಡಿ ಸ್‌ಟಾ ಕಾಪಿ ಮತ್ತು ಹಾರ್ಡ್ ಕಾಪಿಯನ್ನು ಸಂಬಂಧಪಟ್ಟ ಡಿಸಿಪಿ ಕಚೇರಿಯ ಮುಖಾಂತರ ಅ.೨೦ ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಈ ಪ್ರೋತ್ಸಾಹ ಧನವು ಸಂಪೂರ್ಣ ಕೋರ್ಸ್‌ಗೆ ಒಂದು ಬಾರಿ ಮಾತ್ರ ನೀಡಲಾಗುತ್ತದೆ. ಪದವಿ/ಸ್ನಾತಕೋತ್ತರ ಪದವಿಯಲ್ಲಿ ಹಿಂದಿನ ಪರೀಕ್ಷೆಯಲ್ಲಿ ಶೇ.೬೦ ಕ್ಕೂ ಹೆಚ್ಚಿ ಅಂಕ ಪಡೆದಿರಬೇಕು. ಇದು ಅಂಚೆ ಶಿಕ್ಷಣ ಪದವಿಗಳಿಗೆ ಅನ್ವಯಿಸುವುದಿಲ್ಲ.
ಕೋರ್ಸ್‌ಗಳ ಮತ್ತು ಸಹಾಯಧನದ ವಿವರ:
ಎಲ್ಲಾ ಪದವಿಗಳಿಗೆ ೧೦ ಸಾವಿರ ರೂ. ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ೨೦ ಸಾವಿರ ರೂ., ಇಂಜಿನಿಯರಿಂಗ್ ಸ್ನಾತಕೋತ್ತರ(ಎಂ.ಇ, ಎಂ.ಟೆಕ್, ಎಲ್‌ಎಲ್‌ಎಂ,ಎಂ.ವಿ.ಎಸ್) ಪದವಿಗಳಿಗೆ ೩೦ ಸಾವಿರ ರೂ. ವೈದ್ಯಕೀಯ ಪದವಿಗಳಿಗೆ (ಎಂಬಿಬಿಎಸ್, ಬಿಡಿಎಸ್, ಾರ್ಮಾ-ಡಿ ಸಿ.ಎ) ೨೫ ಸಾವಿರ ರೂ., ವೈದ್ಯಕೀಯ ಸ್ನಾತಕೋತ್ತರ ಪದವಿಗಳಿಗೆ(ಎಂ.ಡಿ,ಎಂ.ಎಸ್, ಎಂಡಿಎಸ್) ೪೦ ಸಾವಿರ ರೂ. ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ಡಿಪ್ಲೋಮಾ ಕೋರ್ಸ್‌ಗಳಿಗೆ ೧೦ ಸಾವಿರ ರೂ. ಧನ ಸಹಾಯ ನೀಡಲಾಗುತ್ತದೆ.