ಮೈಸೂರು: ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) 2022-23ನೇ ಶೈಕ್ಷಣಿಕ ಸಾಲಿಗೆ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ (ಬಿವಿಎ) ದೃಶ್ಯಕಲೆಯಲ್ಲಿ ಪ್ರಥಮ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.
ಇದು ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ (ಅಚ್ಚುಕಲೆ), ಅನ್ವಯ ಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಪದವಿಯಾಗಿದ್ದು, ನಂತರ ಎರಡು ವರ್ಷದ ಸ್ನಾತಕೋತ್ತರ ಪದವಿ ಸಹ ಇರುತ್ತದೆ.