ಜಿಲ್ಲೆ

ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಮಂಜುನಾಥ ತಿಮ್ಮಯ್ಯ

ಮೈಸೂರು: 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾವಾದಿ ವೃತ್ತಿಯ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಡಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.


ಅರ್ಹರು ಸಮಾಜ ಕಲ್ಯಾಣ ಇಲಾಖೆಯ www.sw,kar.nic.in , http://www.sw,kar.nic.in>
ವೆಬ್‌ಸೈಟ್‌ನಲ್ಲಿ ಜುಲೈ 31 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ನೋಂದಾಯಿಸಲು ಅವಕಾಶವಿದ್ದು,

ನೋಂದಾಯಿಸಿದ ನಂತರ ದಾಖಲಾತಿ ಪತ್ರಾಂಕಿತ ಅಧಿಕಾರಿಗಳ ದೃಢೀಕರಣದೊಂದಿಗೆ ಆಯಾಯ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಗ್ರೇಡ್-1 ಅವರ ಕಚೇರಿಗೆ ಜುಲೈ 31ರೊಳಗೆ ಸಲ್ಲಿಸಬೇಕು. ಮಾಹಿತಿಗೆ ದೂ. 0821-2520910 ಸಂಪರ್ಕಿಸಬಹುದು

ಡಿಪ್ಲೋಮಾಗೆ ಪ್ರವೇಶ ಆರಂಭ


ಮೈಸೂರು:
2024-25 ನೇ ಸಾಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಪ್ರವೇಶಾತಿಯನ್ನು ಪ್ರಾರಂಭ ಮಾಡಲಾಗಿದ್ದು, ಎಸ್‌ಎಸ್‌ಎಲ್‌ಸಿ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


3 ವರ್ಷ ಹಾಗೂ ಕಡ್ಡಾಯ ಒಂದು ವರ್ಷದ ಇಂಟರ್ನ್‌ಶಿಪ್ ತರಬೇತಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಜೂ.29 ಕೊನೆಯ ದಿನ. ಮಾಹಿತಿಗಾಗಿ ದೂ.821-2582750, ಸಹಾಯವಾಣಿ:155267, ಮೊ.9980557205 ಸಂಪರ್ಕಿಸಬಹುದು.