ಜಿಲ್ಲೆ

ಅರ್ಜಿ ಆಹ್ವಾನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕಲಾಭವನ ಎದುರಿನ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆ (ಟಿಸಿಡಬ್ಲ್ಯೂ) ಪ್ರಸ್ತುತ 2024--&25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕನ್ನಡ, ಇಂಗ್ಲಿಷ್​ ಹಾಗೂ ಉರ್ದು ಮಾಧ್ಯಮಗಳಲ್ಲಿ ಡಿಎಲ್​ಇಡಿ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ಹೆಣ್ಣು ಮಕ್ಕಳಿಗೆ ತರಬೇತಿ ಪಡೆಯಲು ಅವಕಾಶವಿದ್ದು, ಕಲಾ, ವಿಜ್ಞಾನ, ವಾಣಿಜ್ಯ ವಿಷಯದಲ್ಲಿ ಪಿಯುಸಿ ಪಾಸಾಗಿರಬೇಕು. ಸಾಮಾನ್ಯ ವರ್ಗದವರು ಶೇ. 50 ಮತ್ತು ಎಸ್​ಸಿ, ಎಸ್​ಟಿ ಹಾಗೂ ಪ್ರವರ್ಗ 1-ರ ವಿದ್ಯಾಥಿರ್ಗಳು ಶೇ. 45 ರಷ್ಟು ಅಂಕ ಪಡೆದಿರಬೇಕು. ಪದವೀಧರ ವಿದ್ಯಾಥಿರ್ನಿಯರೂ ಡಿಎಲ್​ಇಡಿ ತರಬೇತಿಗೆ ಪ್ರವೇಶ ಪಡೆಯಬಹುದು.
ಸಂಸ್ಥೆಯಲ್ಲಿ ಮೂಲ ಸೌಕರ್ಯಗಳಾದ ವಸತಿ ನಿಲಯ, ಕಂಪ್ಯೂಟರ್​ ತರಬೇತಿ, ಟಿಇಟಿ/ಸಿಇಟಿ ತರಬೇತಿ, ಉಚಿತ ಮಾರ್ಗದರ್ಶನ ಮಾಡಲಾಗುವುದು. ನುರಿತ ಸಿಬ್ಬಂದಿ ಜತೆಗೆ ವಿದ್ಯಾಥಿರ್ಗಳ ಕಲಿಕಾ ಸಾಮರ್ಥ್ಯ ಅಧಿಕಗೊಳಿಸಲು ಪೂರಕವಾದ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯ ಹಾಗೂ ವಿದ್ಯಾಥಿರ್ ವೇತನ ಸೌಲಭ್ಯವಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಸ್ಥೆ ಸಂಪಕಿರ್ಸಬಹುದು ಎಂದು ಪ್ರಾಚಾರ್ಯ ಬಿ.ಎಂ. ಬಡಿಗೇರ ಕೋರಿದ್ದಾರೆ.