ಜಿಲ್ಲೆ

ಅರ್ಜಿ ಆಹ್ವಾನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರಾವಣ ಮಾಸದ ನಿಮಿತ್ತ ಧಾರವಾಡ ಬಸವ ಕೇಂದ್ರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಆ. 11ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಆರ್​.ಎಲ್​. ಎಸ್​. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಚನ ಕಂಠಪಾಠ ಬರೆಯುವ ಸ್ಪರ್ಧೆ ಆಯೋಜಿಸಲಾಗಿದೆ.
1 ನೇ ವಿಭಾಗದಲ್ಲಿ 5 ಹಾಗೂ 6 ನೇ ತರಗತಿ, 2 ನೇ ವಿಭಾಗದಲ್ಲಿ 7 ಮತ್ತು 8 ನೇ ತರಗತಿ, 3 ನೇ ವಿಭಾಗದಲ್ಲಿ 9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳು 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಬರೆಯಬೇಕು. ಹೆಚ್ಚು ವಚನಗಳನ್ನು ಬರೆಯುವುದರ ಜತೆಗೆ ಶಬ್ದ ಬರಹ, ದೋಷರಹಿತ ಬರಹವಿರಬೇಕು. ಭಾಗವಹಿಸುವ ವಿದ್ಯಾಥಿರ್ಗಳು ಪೆನ್ನು, ಪ್ಯಾಡ್​ ಹಾಗೂ ಶಾಲಾ ಮುಖ್ಯ ಶಿಕ್ಷಕರ ಸಹಿಯುಳ್ಳ ಪತ್ರದೊಂದಿಗೆ ಆ. 8ರೊಳಗೆ ಹೆಸರು ನೋಂದಾಯಿಸಬೇಕು. ಹೆಸರು, ತರಗತಿ, ಮನೆ ವಿಳಾಸ, ದೂರವಾಣಿ ಸಂಖ್ಯೆಯನ್ನು ಭರ್ತಿ ಮಾಡಿದ ಅರ್ಜಿಯನ್ನು ಎಲ್​.ಇ.ಎ ಕ್ಯಾಂಟೀನ್​ ಕಚೇರಿ ಅಥವಾ ಕಲಾಭವನ ಆವರಣ ಬಳಿಯ ಬಸವಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಸಂಚಾಲಕ ಉಮೇಶ ಕಟಗಿ ತಿಳಿಸಿದ್ದಾರೆ.