ಜಿಲ್ಲೆ

ಅರ್ಜಿ ಆಹ್ವಾನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರು ಆಧಾರಿತ ಮಹಾಗುರು ಎಜುಕೇಶನಲ್​ ಟ್ರಸ್ಟ್​ ವತಿಯಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾಥಿರ್ಗಳಿಂದ ವಿದ್ಯಾಥಿರ್ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಯ 2023&24ರಲ್ಲಿ ದ್ವೀತಿಯ ಪಿಯುಸಿ ಉತ್ತೀರ್ಣರಾಗಿ ಪದವಿ, ಡಿಪ್ಲೋಮಾ ಸೇರ ಬಯಸುವವರು ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥಿರ್ಗಳು ದ್ವೀತಿಯ ಪಿಯುಸಿಯಲ್ಲಿ ಶೇ.85, ಪದವಿಯಲ್ಲಿ ಕನಿಷ್ಠ ಶೇ. 60ರಷ್ಟು ಅಂಕ ಪಡೆದಿರಬೇಕು. ಹಿಂದಿನ ವರ್ಷ ಅಥವಾ ಸೆಮಿಸ್ಟರ್​ನಲ್ಲಿ ಅನುತ್ತೀರ್ಣರಾಗಿರಬಾರದು. ಆಸಕ್ತ ವಿದ್ಯಾಥಿರ್ಗಳು mahagurutrust.com ವೆಬ್​ಸೈಟ್​ನಲ್ಲಿ ಜೂ. 15ರೊಳಗೆ ಅಜಿರ್ಸಬಹುದು. ಹೆಚ್ಚಿನ ಮಾಹಿತಿಗೆ ಮಹಾಗುರು ಎಜುಕೇಶನಲ್​ ಟ್ರಸ್ಟ್​ ಸಂಪಕಿರ್ಸಬಹುದು.