ಬೈಲಹೊಂಗಲ: ಪ್ರಸಕ್ತ ಸಾಲಿನಲ್ಲಿ ತಾಲೂಕು ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶ ವಿಸ್ತರಣೆ (ಮಾವು, ಬಾಳೆ, ರಾಮಭೂತಾನ ಹಾಗೂ ಇತರ ಹಣ್ಣಿನ ಬೆಳೆ) ಹೈಬ್ರಿಡ್ ತರಕಾರಿ ಪ್ರದೇಶ ವಿಸ್ತರಣೆ (ಪಜಾ/ಪಪಂ) ರೈತರಿಗೆ ಮಾತ್ರ,
ಬಿಡಿ ಹೂ (ಪಜಾ/ಪಪಂ ರೈತರಿಗೆ) ಪ್ರದೇಶ ವಿಸ್ತರಣೆಯಡಿ ಗುಲಾಬಿ ಬೆಳೆ, ಕೆಡಿಮೆ ವೆಚ್ಚದ ಅಣಬೆ ಉತ್ಪಾದನೆ ಘಟಕ, ಹಳೆ ಗಿಡಮರಗಳ ಪುನಶ್ಚೇತನ, ಸಮಗ್ರ ಪೋಷಕಾಂಶ ನಿರ್ವಹಣೆ (ಪಜಾ/ಪಪಂ ರೈತರಿಗೆ) ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಸಂರಕ್ಷಿತ ಬೇಸಾಯದಡಿ ಪ್ಲಾಸ್ಟಿಕ್ ಹೊದಿಕೆ, ಚಪ್ಪರ/ಆಸರೆಯ ವ್ಯವಸ್ಥೆ ಮೂಲಕ ತರಕಾರಿ ಉತ್ಪಾದನೆ ಮತ್ತು ಕಳೆ ಚಾಪೆ, ಯಾಂತ್ರಿಕರಣ, ಪ್ರಾಥಮಿಕ ಸಂಸ್ಕರಣಾ ಘಟಕ, ಪ್ಯಾಕ್ ಹೌಸ್ (ಪಜಾ ರೈತರಿಗೆ ಮಾತ್ರ)
ಮಾರುಕಟ್ಟೆ ಕಾರ್ಯಕ್ರಮದಡಿ ತಳ್ಳುವ ಮಾರಾಟ ಗಾಡಿ ಮತ್ತು ಇತರ ಘಟಕ ಸೇರಿ ವಿವಿಧ ಯೋಜನೆಗಳಿಗೆ ಸಹಾಯಧನ ಪಡೆಯಲು ಅವಕಾಶ ಇದೆ. ಆಸಕ್ತರು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಅಥವಾ ತಾಲೂಕು ತೋಟಗಾರಿಕೆ ಕಚೇರಿಗೆ ಜೂ.30ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.